ಕಣಗಾಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಂಟು ನಿರ್ದೇಶಕರು ಆಯ್ಕೆಯಾದ ಹಿನ್ನೆಲೆ ಮುಖಂಡರು ಅಭಿನಂದನೆ ಸಲ್ಲಿಸಿದರು. ಜಯಮ್ಮ, ಪಾರ್ವತಮ್ಮ, ಆರತಿ, ಭಾರತಿ, ಶಿವಮ್ಮ, ಲತಾ, ಪ್ರತೀಮಾ, ಜಯಮ್ಮ, ತಮ್ಮೆಗೌಡ, ಸ್ವಾಮಯ್ಯ, ಕೆ.ಮಹದೇವ್, ವಾಸು, ಬಲರಾಮು, ಪುಟ್ಟರಾಜು ಇದ್ದರು. 
ಮೈಸೂರು

ಕಣಗಾಲು ಡೇರಿ ಚುನಾವಣೆಯಲ್ಲಿ ಪ್ರಬಲ ಸಾಧಿಸಿದ ಜೆಡಿಎಸ್

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಂಟು ಹಾಗೂ ಕಾಂಗ್ರೆಸ್ ಬೆಂಬಲಿತ ಮೂರು ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ, ಒಟ್ಟು ಹನ್ನೊಂದು ನಿರ್ದೇಶಕರ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ಜಯಮ್ಮ, ಪಾರ್ವತಮ್ಮ, ಆರತಿ, ಭಾರತಿ, ಶಿವಮ್ಮ, ಲತಾ, ಪ್ರತೀಮಾ, ಜಯಮ್ಮ ಮತ್ತು ಕಾಂಗ್ರೆಸ್ ಬೆಂಬಲಿತರಾದ ಅರ್ಚಿತಾ, ಅನಿತಾ, ಪರ್ವೀನ್ ಅವರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಹಿತೇಂದ್ರ ನೇತೃತ್ವದ ತಂಡ ಕರ್ತವ್ಯ ನಿರ್ವಹಿಸಿದರು.
ಹೆಚ್ಚಿನ ಸ್ಥಾನ ಜೆಡಿಎಸ್ ಅಭ್ಯರ್ಥಿಗಳು ಪಡೆದ ಹಿನ್ನೆಲೆ ಪಕ್ಷದ ಮುಖಂಡರು, ಕಾರ್ಯಕರ್ತರು ಫಲಿತಾಂಶದ ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಟ್ಟದಪುರ ಪೊಲೀಸ್ ಠಾಣೆಯಿಂದ ಬಿಗಿ ಬಂದುಬಸ್ತು ನಿಯೋಜಿಸಲಾಗಿತ್ತು.
ಮುಖಂಡರಾದ ತಮ್ಮೆಗೌಡ, ಸ್ವಾಮಯ್ಯ, ಡಿ.ಕೆ. ನಟೇಶ್, ಕೆ. ಮಹದೇವ್, ಪ್ರಭಾಕರ್, ಮಂಜುನಾಥ್, ಜಗದೀಶ್, ಪುಟ್ಟರಾಜು, ವಾಸು, ಬಲರಾಮ, ಶ್ರೀನಿವಾಸ, ಕುಮಾರ, ಸೈಯದ್, ಮೂರ್ತಿ, ಸಂಘದ ಸಿಇಒ ಜ್ಞಾನವತಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಸದಸ್ಯರು ಇದ್ದರು.