ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಿಕ್ಕು ಆನಂದ ಥೇರ, ಪ್ರೊ.ಎಸ್.ನರೇಂದ್ರ ಕುಮಾರ್, ಡಾ.ಜೆ.ಸೋಮಶೇಖರ್ ಇದ್ದರು. 
ಮೈಸೂರು

ಅಜ್ಞಾನದಲ್ಲಿ ಸಿಲುಕಿಕೊಂಡಿರುವುದೇ ಎಲ್ಲಕ್ಕಿಂತ ದೊಡ್ಡ ಬಂಧನ

ಅಜ್ಞಾನದಲ್ಲಿ ಸಿಲುಕಿಕೊಂಡಿರುವುದೇ ಎಲ್ಲಕ್ಕಿಂತ ದೊಡ್ಡ ಬಂಧನ ಎಂದು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಉಪಾಧ್ಯಕ್ಷರೂ ಆದ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಬಿಕ್ಕು ಆನಂದ ಥೇರ ಅಭಿಪ್ರಾಯಪಟ್ಟರು.
ನಗರದ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಕಲ್ಪಿಸಿದ ನಮ್ಮ ಬದುಕಿನಲ್ಲಿ ಬುದ್ಧರ ಪ್ರಸ್ತುತತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದರಿಂದ ದುಃಖಗಳು ಹೆಚ್ಚಾಗುತ್ತಲೇ ಇವೆ. ಈಗ ಹಿಂಸೆಯನ್ನು ಪ್ರತಿಪಾದನೆ ಮಾಡುತ್ತಾರೆ. ಭಗವಾನ್ ಬುದ್ಧ ಮೈತ್ರಿ, ಬ್ರಾತೃತ್ವದ ಬಗ್ಗೆ ಹೇಳುತ್ತಾರೆ. ಅದರ ಬಗ್ಗೆ ತಿಳಿದುಕೊಳ್ಳಬೇಕು. ಯಾವ ರೀತಿ ತಾಯಿ ಮಗುವನ್ನು ಪ್ರೀತಿಯಿಂದ ನೋಡುತ್ತಾಳೊ ಅಂತಹ ಪ್ರೀತಿಯನ್ನು ಎಲ್ಲ ಜೀವಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲ ಮನುಷ್ಯರ ಮೇಲೆ, ಜೀವಿಗಳ ಮೇಲೆ ತಾಯಿಯಂತೆ ಪ್ರೀತಿಯನ್ನು ನಾವು ತೆಗೆದುಕೊಂಡು ಹೋಗಬೇಕು. ಇದರಿಂದ ಜಾತಿಗಳ ಸಮಸ್ಯೆಗಳೇ ಬರುವುದಿಲ್ಲ. ಜಾತಿ ಎನ್ನುವುದು ದೊಡ್ಡ ರೋಗ. ಬುದ್ಧರ ಪ್ರಕಾರ ಜಾತಿ ರೋಗ ಹಾಗೂ ನಶೆ ಇದ್ದಂತೆ. ಜಾತಿ ಎಂಬ ನಶೆಯಲ್ಲಿ ಇದ್ದರೆ ಅದರೊಳಗೇ ಇರಬೇಕು. ಅದರ ಬಗ್ಗೆಯೇ ಮಾತನಾಡಬೇಕು, ಅದರ ಬಗ್ಗೆ ಯೋಚನೆ ಮಾಡಬೇಕು ಅನ್ನಿಸುತ್ತಿರುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಇದ್ದರು.