Beer  
ಮೈಸೂರು

ಲಕ್ಷಾಂತರ ರೂ. ಮೌಲ್ಯದ ಬಿಯರ್ ನಾಶ

ಮೈಸೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ಬುಧವಾರ ಅವಧಿ ಮೀರಿದ ಲಕ್ಷಾಂತರ ರೂ.ಮೌಲ್ಯದ ಬಿಯರ್ ನಾಶಪಡಿಸಿದ್ದಾರೆ. ಮೈಸೂರಿನ ಕೆಎಸ್‌ಬಿಸಿಎಲ್‌ನ ಎರಡು ಡಿಪೋಗಳಲ್ಲಿ ಮಾರಾಟವಾಗದೆ ಉಳಿದಿದ್ದ ವಿವಿಧ ಮಾದರಿಯ ಒಟ್ಟು 30,366 ಲೀಟರ್ ಬಿಯರನ್ನು ಕೂರ್ಗಳ್ಳಿ ಡಿಪೋನಲ್ಲಿ ಮೈಸೂರು ಉಪ ವಿಭಾಗದ ಉಪ ಅಧೀಕ್ಷಕ ಎಚ್.ಕೆ.ರಮೇಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ ಚರಂಡಿಗೆ ಸುರಿಯುವ ಮೂಲಕ ನಾಶಪಡಿಸಿದರು.