ಸಾಂದರ್ಭಿಕ ಚಿತ್ರ 
ಮೈಸೂರು

ಅಪರಿಚಿತರಿಗೆ ಫೋನ್‌ಪೇ ಮಾಡುವ ಮುನ್ನ ಇರಲಿ ಎಚ್ಚರ : ಮೈಸೂರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ

ಮೈಸೂರು: ಸಹೋದರನ ಖಾತೆಗೆ ಡೆಪಾಸಿಟ್ ಮೆಷಿನ್ ಮೂಲಕ ಹಣ ಹಾಕಲು ಹೋದ ವ್ಯಕ್ತಿಯೊಬ್ಬರು ವಂಚಕನೊಬ್ಬನ ಮಾತು ಕೇಳಿ 10 ಸಾವಿರ ರೂ. ಕಳೆದುಕೊಂಡಿದ್ದಾರೆ.
ಎನ್.ಆರ್. ಮೊಹಲ್ಲಾ ನಿವಾಸಿ ಕೆ.ಸಾತ್ವಿಕ್ ಕುಮಾರ್ ಎಂಬವರೇ ಹಣ ಕಳೆದುಕೊಂಡವರು. ಚೀಟಿಯ ಹಣವನ್ನು ಸಹೋದರ ಖಾತೆಗೆ ಹಾಕಲು ಜೂ.8 ರಂದು ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡೆಪಾಸಿಟ್ ಮೆಷಿನ್ ಬಳಿ ಹೋಗಿದ್ದರು.
ಈ ಸಂದರ್ಭ ಆಗಮಿಸಿದ ವ್ಯಕ್ತಿಯೊಬ್ಬ ನಿಮ್ಮಲ್ಲಿರುವ 10 ಸಾವಿರ ರೂ. ನೀಡಿದ ನಿಮಗೆ ಫೋನ್‌ಪೇ ಮೂಲಕ ಹಣ ಕಳುಹಿಸುತ್ತೇನೆ ಎಂದು ಹೇಳಿದ. ಆತನ ಮಾತು ನಂಬಿ ಹಣವನ್ನು ನೀಡಿದರು. ನಂತರ ಸಾತ್ವಿಕ್ ಅವರ ನಂಬರ್‌ಗೆ ಆರೋಪಿಯು 10 ಸಾವಿರ ರೂ.ಗಳನ್ನು ಫೋನ್‌ಪೇ ಮೂಲಕ ಕಳುಹಿಸಿರುವುದನ್ನು ತೋರಿಸಿ ಹಣದೊಂದಿಗೆ ಸ್ಥಳದಿಂದ ನಿರ್ಗಮಿಸಿದ. ಆದರೆ, ಇದುವರೆಗೆ ಖಾತೆಗೆ ಹಣ ಬಾರದ ಹಿನ್ನೆಲೆಯಲ್ಲಿ ಸಾತ್ವಿಕ್ ಶನಿವಾರ ನರಸಿಂಹರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.