ಸಾಲಿಗ್ರಾಮ ತಾಲೂಕು ಆಡಳಿತದಿಂದ ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ರುಕಿಯ ಬೇಗಂ ಚಾಲನೆ ನೀಡಿದರು. ತೇಜಮೂರ್ತಿ, ಸರಗೂರು ಶಿವು, ಭೇರ್ಯ ಪ್ರಕಾಶ್, ದಡದಹಳ್ಳಿ ನಟರಾಜ್ ಇದ್ದರು. 
ಮೈಸೂರು

ಬಸವಣ್ಣ ಸಮಾಜ ಸುಧಾರಕ, ಅಭಿವೃದ್ಧಿ ಹರಿಕಾರ

ಸಾಲಿಗ್ರಾಮ: ಸಮಾಜದ ಸುಧಾರಕ, ಅಭಿವೃದ್ಧಿ ಹರಿಕಾರ ಬಸವಣ್ಣ ಎಂದು ತಹಸೀಲ್ದಾರ್ ರುಕೀಯಾ ಬೇಗಂ ಬಣ್ಣಿಸಿದರು.
ಸಾಲಿಗ್ರಾಮ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಜನರ ಸಮಾನತೆಗೆ ಪಣ ತೊಟ್ಟು ನಿಂತ ವ್ಯಕ್ತಿ ಬಸವಣ್ಣ. ಅವರನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಅದೇ ರೀತಿ ಅವರ ವಚನಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಬಸವಣ್ಣ ನಡೆದ ದಾರಿಯಲ್ಲಿ ನಾವು ಕೂಡ ಸಾಗಬಹುದು ಎಂದರು.
ಬಸವಣ್ಣ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ ಎಲ್ಲ ಸಮಾಜದ ಜನರನ್ನು ಸಮಾನತೆಯಿಂದ ಬದುಕಲು ವೇದಿಕೆ ಕಲ್ಪಿಸಿ ಕೊಟ್ಟಂತ ಮಹಾನ್ ನಾಯಕ. ಜಾತಿ, ಅಸ್ಪಶ್ಯತೆ ಹೋರಾಡಿದ ಮಾನವತಾವಾದಿ. ಅವರು ಕೊಟ್ಟಂತಹ ವಚನಗಳು ಸರ್ವಕಾಲಿಕ ಎಂದರು.
ವೀರಶೈವ ಹಿರಿಯ ಮುಖಂಡ ನಿವೃತ್ತ ಶಿಕ್ಷಕ ನಿಂಗಪ್ಪ ಮಾತನಾಡಿ, ಬಸವಣ್ಣ ಅವರ ಜಯಂತಿ ವೀರಶೈವ ಲಿಂಗಾಯತರಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕು. ತಾಲೂಕು ಆಡಳಿತದಿಂದ ಆಚರಿಸುವ ಯಾವುದೇ ಮಹನೀಯರ ಜಯಂತಿಗೆ ನಾವೆಲ್ಲರೂ ಭಾಗವಹಿಸಿ ಗೌರವ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತೇಜಮೂರ್ತಿ ಮಾತನಾಡಿದರು. ವೀರಶೈವ ಮಹಾಸಭಾ ತಾಲೂಕು ಯೂತ್ ಘಟಕದ ಅಧ್ಯಕ್ಷ ಸರಗೂರು ಶಿವು, ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಭೇರ್ಯ ಪ್ರಕಾಶ್, ಖಜಾಂಚಿ ದಡದಹಳ್ಳಿ ನಟರಾಜ್, ವೀರಶೈವ ಲಿಂಗಾಯತ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಗ್ಯಾರಂಟಿ ಸಮಿತಿ ಸದಸ್ಯ ಸಣ್ಣರಾಮೇಗೌಡ, ಉಪತಹಸೀಲ್ದಾರ್ ಮಹೇಶ್, ಶಿವು ಶಿರಸ್ತೇದಾರ್ ತಿಮ್ಮಯ್ಯ, ಗ್ರಾಮ ಆಡಳಿತ ಅಧಿಕಾರಿ ರವೀಂದ್ರ, ಎಲೆಮುದ್ದನಹಳ್ಳಿ ನಿಂಗಪ್ಪ ಲೋಹಿತಸ್ವ, ನಾರಾಯಣ, ಕುಮಾರಸ್ವಾಮಿ, ತುಕಾರಾಂ, ಕೃಷ್ಣಮೂರ್ತಿ, ಮುನಿರೆಡ್ಡಿ , ರಾಕೇಶ್, ಚಂದ್ರು, ಗಂಗಾಧರ್, ಪ್ರೀತಮ್, ಶಿವು, ರವಿಕುಮಾರ್ ಇತರರು ಇದ್ದರು.