ಬನ್ನೂರು ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ದಿ.ಎಚ್.ಎಸ್.ಮಹದೇವ ಪ್ರಸಾದ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ವೈ.ಎನ್.ಶಂಕರೇಗೌಡ, ಆರ್.ಶಂಕರೇಗೌಡ, ವೈ.ಎಂ.ಚಂದ್ರು, ನಾಜೀಂ ಉದ್ದೀನ್, ವೈ.ಕೆ.ಕ್ಯಾತೇಗೌಡ ಇದ್ದರು.
ಬನ್ನೂರು: ದಿ.ಎಚ್.ಎಸ್.ಮಹದೇವ ಪ್ರಸಾದ್ ಅವರಿಗೆ ಅಭಿವೃದ್ಧಿ ಪರವಾದ ದೂರದೃಷ್ಟಿತ್ವ ಅಗಾಧವಾಗಿತ್ತು ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಪಟ್ಟಣ ಸಮೀಪದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದಿ.ಎಚ್.ಎಸ್.ಮಹದೇವ ಪ್ರಸಾದ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕಾರ್ಯಗಳು, ತಾಲೂಕಿನ ಅಭಿವೃದ್ಧಿಗೆ ರೂಪಿಸಬೇಕಾದ ಯೋಜನೆಯನ್ನು ಅಧಿಕಾರಿ ವರ್ಗದೊಂದಿಗೆ ಸದಾಕಾಲ ಚರ್ಚೆ ಮಾಡುತ್ತಿದ್ದರು. ಗಾಂಧೀಜಿ ಅವರು ಕಂಡ ಗ್ರಾಮಾಭಿವೃದ್ಧಿ ಕನಸು ನನಸು ಮಾಡುವ ಮಹಾದಾಸೆ ಹೊಂದಿದ್ದರು ಎಂದು ನೆನೆದರು.
ಕಾಂಗ್ರೆಸ್ ಮುಖಂಡ ಆರ್.ಶಂಕರೇಗೌಡ ಮಾತನಾಡಿ, ಮಹದೇವ ಪ್ರಸಾದ್ ಅವರಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಇತ್ತು. ಆದ್ದರಿಂದಲೇ ಯಾಚೇನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ನಾಜೀಂ ಉದ್ದೀನ್ ಮಾತನಾಡಿ, ಮಹದೇವ ಪ್ರಸಾದ್ ಅರಲ್ಲಿದ್ದ ದೂರದೃಷ್ಟಿತ್ವ ಹೆಚ್ಚಿತ್ತು. ಯುವಕರಿಗೆ ಸಾಕಷ್ಟು ಉದ್ಯೋಗ ಕೊಡಬೇಕು ಎನ್ನುವ ಮಹದಾಸೆ ಇತ್ತು ಎಂದು ತಿಳಿಸಿದರು.
ಎಚ್.ಎಸ್.ಮಹದೇವ ಪ್ರಸಾದ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೈ.ಕೆ.ಉಮೇಶ್, ವೈ.ಕೆ.ಬೋರೇಗೌಡ, ವೈ.ಎಚ್. ಹನುಮಂತೇಗೌಡ, ವೈ.ಜಿ. ಮಹೇಂದ್ರ, ಪ್ರತಿಭಾ ಮಲ್ಲೇಶ್, ಕೆಂಪಮ್ಮ ಸಿದ್ದೇಗೌಡ, ರಾಜು, ದುಗೇಶ, ವೈ.ಎಂ.ನಾಗೇಂದ್ರ, ವೈ.ಎಸ್. ಶಿವರಾಮು, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಮಂಜೇಶ್‌ಗೌಡ, ಕಾರ್ಯನಿರ್ವಹಣಾಧಿಕಾರಿ ವೈ.ಕೆ.ಕ್ಯಾತೇಗೌಡ, ವೈ.ಎಲ್.ಮಹದೇವು, ವೈ.ಎಂ.ದಿಲೀಪ್, ಎನ್.ಎಂ.ನವೀನ್‌ಕುಮಾರ್, ಶ್ವೇತಾ, ಮೇಘಾ, ಲಕ್ಷ್ಮೀ, ನಂಜೇಗೌಡ, ಗೀತಾ, ಲೋಕೇಶ, ಮರೀಗೌಡ, ವೈ.ಎಸ್. ಶೇಖರ್, ದಲಿತ ಸಂಘರ್ಷ ಸಮಿತಿಯ ಸೋಮಶೇಖರ್, ವೈ.ಎಸ್.ಮಹದೇವು, ಕನ್ನಡ ಸಾಹಿತ್ಯ ಪರಿಷತ್ತು ಬನ್ನೂರು ಹೋಬಳಿ ಘಟಕದ ಅಧ್ಯಕ್ಷ ವೈ.ಎ.ಪುಟ್ಟರಾಜು ಇದ್ದರು.