ಬನ್ನೂರು: ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ರೋಟರಿ ಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜು.11ರಂದು ಮಧ್ಯಾಹ್ನ 1ರಿಂದ 4 ಗಂಟೆವರೆಗೆ ನೇತ್ರ ತಪಾಸಣಾ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ತಿಳಿಸಿದ್ದಾರೆ.
ತಪಾಸಣೆಗೆ ಬರುವವರು ಆಧಾರ್‌ಕಾರ್ಡ್, ಜೆರಾಕ್ಸ್ ಪ್ರತಿ, ಮೊಬೈಲ್ ನಂಬರ್ ತರುವಂತೆ ತಿಳಿಸಲಾಗಿದೆ. ಕಣ್ಣಿನ ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರ ದೃಷ್ಟಿದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆಕಣ್ಣು, ರಾತ್ರಿ ಕುರುಡುತನಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಕಣ್ಣಿನ ಪೊರೆ ಇರುವ ಶಿಬಿರಾರ್ಥಿಗಳನ್ನು ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ, ಶಸ್ತ್ರ ಚಿಕಿತ್ಸೆ ಮಾಡಿಸಿ ಪುನಃ ಸ್ವಸ್ಥಳಕ್ಕೆ ತಂದು ಬಿಡಲಾಗುವುದು ಎಂದು ಹೇಳಿದರು.
ಸುತ್ತಮುತ್ತಲಿನ ಗ್ರಾಮಸ್ಥರು, ಕಣ್ಣಿನ ಅಂಧತ್ವ ಇರುವವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.