ಬನ್ನಿಕುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಡಿ.ಎಂ.ತ್ರಿವೇಣಿ ಮಾತನಾಡಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಪ್ರಗತಿಪರ ಕೃಷಿಕ ಚೆಲುವರಾಜ್, ಡಾ.ಕೆ.ಪಿ.ಪ್ರಸನ್ನ, ಸಹ ಶಿಬಿರಾಧಿಕಾರಿ ಎಂ.ಸಿ.ಲಕ್ಷ್ಮಯ್ಯ ಮತ್ತಿತರರಿದ್ದರು.
ಬನ್ನಿಕುಪ್ಪೆ: ಶಿಕ್ಷಣ, ಸಮಾನತೆ, ಸ್ವಾತಂತ್ರೃ ಹಾಗೂ ತಮ್ಮ ಹಕ್ಕುಗಳನ್ನು ಪಡೆದರೆ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ.ತ್ರಿವೇಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬನ್ನಿಕುಪ್ಪೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹುಣಸೂರು ಸರ್ಕಾರಿ ಮಹಿಳಾ ಕಾಲೇಜು ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಮಹಿಳೆ ಯಾವ ಸ್ಪರ್ಧೆಯಲ್ಲೂ ಪುರುಷರಿಗಿಂತ ಹಿಂದೆ ಉಳಿದಿಲ್ಲ. ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಈ ಸಮಾಜದ ಸರಿಯಾದ ಮಾಹಿತಿ ಹಾಗೂ ತಿಳಿವಳಿಕೆಗಳನ್ನು ಹೇಳಿದರೆ ಅದನ್ನು ಗ್ರಹಿಸಿ ಬದುಕನ್ನು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗುತ್ತಾಳೆ. ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಿರುವುದು ತುಂಬ ನೋವನ್ನುಂಟು ಮಾಡುತ್ತದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಪ್ರಗತಿಪರ ಕೃಷಿಕ ಚೆಲುವರಾಜ್, ಡಾ.ಕೆ.ಪಿ.ಪ್ರಸನ್ನ, ಸಹ ಶಿಬಿರಾಧಿಕಾರಿ ಎಂ.ಸಿ.ಲಕ್ಷ್ಮಯ್ಯ, ವಿಶ್ರಾಂತ ಪ್ರಾಂಶುಪಾಲ ವೆಂಕಟೇಶ್ ಹಾಗೂ ಗಣ್ಯರು, ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.