ಹರಕೆ ಹೊತ್ತ ಮಹಿಳೆಯರು ಎಂಎಂ ಮುಖ್ಯರಸ್ತೆಯಲ್ಲಿರುವ ಬಿಸಿಲು ಮಾರಮ್ಮ ದೇವಾಲಯಕ್ಕೆ ತೆರಳಿ ಬಾಯಿಬೀಗವನ್ನು ಹಾಕಿಸಿಕೊಂಡು, ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ ಬಣ್ಣಾರಿ ಮಾರಮ್ಮ ದೇವಾಲಯದಲ್ಲಿ ಬಾಯಿಬೀಗವನ್ನು ತೆಗೆಸಿದರು.
ಬನ್ನೂರು: ಪಟ್ಟಣದಲ್ಲಿ ವಾಣಿಯಾರ್ ಭಕ್ತ ಮಂಡಳಿಯ ವತಿಯಿಂದ 51ನೇ ವರ್ಷದ ಬಣ್ಣಾರಿ ಮಾರಮ್ಮ ದೇವಿಯ ಕರಗ ಮಹೋತ್ಸವದ ಪೂಜಾ ಕಾರ್ಯ ಆರಂಭವಾಗಿದ್ದು, ಸುತ್ತಮುತ್ತಲಿನ ಗ್ರಾಮದ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮಂಗಳವಾರದಿಂದ ಪೂಜೆ ಆರಂಭವಾಗಿದ್ದು, ಡೇರಿಯ ಸಮೀಪ ದೇವಿಯನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದೆ. ಬಣ್ಣಾರಿ ಮಾರಮ್ಮ ದೇವಾಲಯದಿಂದ ತೀರ್ಥ ಕೊಡ ಹಾಗೂ ಅಗ್ಗಿಷ್ಟಿಕೆಯನ್ನು ಗ್ರಾಮದ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಪೂಜಾ ಹೋಮ ಹವನಗಳು ನಡೆದು ಸಂಜೆ ತಂಬಿಟ್ಟಿನ ಆರತಿಯ ಕಾರ್ಯವು ನಡೆಯಿತು.
ಬುಧವಾರ ಮುಂಜಾನೆ ದೇವಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತ ಮಹಿಳೆಯರು ಎಂಎಂ ಮುಖ್ಯರಸ್ತೆಯಲ್ಲಿರುವ ಬಿಸಿಲು ಮಾರಮ್ಮ ದೇವಾಲಯಕ್ಕೆ ತೆರಳಿ ಬಾಯಿಬೀಗವನ್ನು ಹಾಕಿಸಿಕೊಂಡು, ಮೈಸೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ ಬಣ್ಣಾರಿ ಮಾರಮ್ಮ ದೇವಾಲಯದಲ್ಲಿ ಬಾಯಿಬೀಗವನ್ನು ತೆಗೆಸಿದರು. ನಂತರ ದೇವಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ನಿರಂತರವಾಗಿ ಧನಸಹಾಯ ಮಾಡಿಕೊಂಡು ಬರುತ್ತಿರುವ ಮಹೇಂದ್ರಸಿಂಗ್ ಕಾಳಪ್ಪ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಯಜಮಾನರಾದ ಚಿನ್ನಯ್ಯಶೆಟ್ಟಿಯಾರ್, ಎನ್.ಗೋಪಾಲ್, ಬಾಲಚಂದ್ರನ್, ಚಲುವರಾಜು, ಕೆ.ರಾಜು, ಆರ‌್ಮುಗಂ, ಎ.ನಾರಾಯಣ, ಪಾಂಡಿಯನ್, ಕುಮಾರ್, ಲಕ್ಷ್ಮಣ್, ಉಮೇಶ್, ಆರ್.ನಾಗರಾಜು, ಕುಮಾರಸ್ವಾಮಿ, ಶ್ರೀಧರ್, ಭಾಗ್ಯರಾಜ್, ಬಾಬು, ಜಿ.ಪುನೀತ್, ರಾಜ್‌ಗೋಪಾಲ್, ವಿಜಯ್‌ಕುಮಾರ್, ಕೆ.ವಿನೋದ್, ಆರ್.ಪ್ರಭಾಕರ್, ನವೀನ್, ಡಿ.ಪ್ರಭು, ಎಂ.ಮಂಜುನಾಥ್, ಎಂ.ಕುಮಾರ್ ಇದ್ದರು.