ಬಾಬೂಜಿ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ವತಿಯಿಂದ ಸೋಮವಾರ ನಗರದ ರೈಲು ನಿಲ್ದಾಣ ಆವರಣದಲ್ಲಿರುವ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪ್ರೊ.ಎಸ್.ಕೆ.ನವೀನ್ ಕುಮಾರ್, ಡಾ.ವಿ.ಎಂ.ರಮೇಶ್, ಪ್ರೊ.ರಾಮನಾಥಂ ನಾಯ್ಡು, ಡಾ.ಎನ್.ಆನಂದ ಗೌಡ, ಡಾ.ಆರ್.ಶರಣಮ್ಮ ಇದ್ದರು.
- ಪ್ರೊ.ಎಸ್.ಕೆ.ನವೀನ್ ಕುಮಾರ್ ಅಭಿಪ್ರಾಯ ಕರಾಮುವಿಯಿಂದ ಪುಣ್ಯಸ್ಮರಣೆ
ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡು ದೇಶದ ಏಳಿಗೆಗೆ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿ ಎಂದು ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್ ಹೇಳಿದರು.
ಮುಕ್ತ ವಿವಿಯ ಡಾ.ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾಕೇಂದ್ರದ ವತಿಯಿಂದ ಸೋಮವಾರ ಬಾಬೂಜಿ ಅವರ ಪುಣ್ಮರಸ್ಮರಣೆ ಅಂಗವಾಗಿ ರೈಲು ನಿಲ್ದಾಣ ಆವರಣದಲ್ಲಿರುವ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ವಿವಿ ವ್ಯವಸ್ಥಾಪನಾ ಮಂಡಳಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ವಿ.ಎಂ.ರಮೇಶ್, ಬಾಬೂಜಿ ಅವರ ಜೀವನ ಮತ್ತು ಶಿಕ್ಷಣ, ಹಸಿರು ಕ್ರಾಂತಿಯ ಕಳಕಳಿ, ರಕ್ಷಣಾ ಸಚಿವರಾಗಿ ಕೈಗೊಂಡ ನಿರ್ಧಾರ, ಆರ್ಥಿಕ ಸುಧಾರಣೆ ಹಾಗೂ ರಾಜಕೀಯ ಸೂಕ್ಷ್ಮತೆ ಮತ್ತು ಸಾಧನೆ ಮಹತ್ತರವಾಗಿದೆ ಎಂದರು.
ಡೀನ್‌ಗಳಾದ ಪ್ರೊ.ರಾಮನಾಥಂ ನಾಯ್ಡು, ಡಾ.ಎನ್.ಆನಂದ ಗೌಡ, ಪೀಠದ ನಿರ್ದೇಶಕಿ ಡಾ.ಆರ್.ಶರಣಮ್ಮ, ಸಹ ಪ್ರಾಧ್ಯಾಪಕ ಡಾ.ಜೆ.ಎಸ್.ಚಂದ್ರಶೇಖರ್ ಇತರರು ಇದ್ದರು.