ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಿದ್ದರಾಜು, ಚಿಕ್ಕಣ್ಣ, ಪುಟ್ಟರಾಜು, ಪ್ರಕಾಶ್ ಇತರರು ಇದ್ದರು.  
ಮೈಸೂರು

ಬಾಬಾ ಸಾಹೇಬರ ಕೊಡುಗೆ ಅಪಾರ

ರವಿಕುಮಾರ್ ಪಿ. ಕೆ
ಸರಗೂರು: ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಇತರ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳು ಅಪಾರ ಎಂದು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಬಳಗ ಅಧ್ಯಕ್ಷ ಎಚ್.ಕೆ. ಸಿದ್ದರಾಜು ತಿಳಿಸಿದರು.
ತಾಲೂಕಿನ ಹಾದನೂರು ಗ್ರಾಮದಲ್ಲಿ ಮಂಗಳವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಂತರ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಅಭಿನಂದಿಸಿ ಮಾತನಾಡಿದರು.
ಅಂಬೇಡ್ಕರ್ 1920 ರಲ್ಲಿ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದವರು ಎಂಬುದನ್ನು ನಾವಿಂದು ನೆನೆಯಬೇಕಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರು ಅಸ್ಪಶ್ಯರಿಗಾಗಿ ಮತ್ತು ಅವರ ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ನಿರಂತರವಾಗಿ ಹೋರಾಟ ಮಾಡಿದರು. ಬ್ರಿಟಿಷರ ವರ್ಣವ್ಯವಸ್ಥೆಯ ವಿರುದ್ಧವೂ ಹೋರಾಡಿದರು ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಸತೀಶ್, ಗುರುಪ್ರಸಾದ್, ಜವರ, ಬಳಗದ ಉಪಾಧ್ಯಕ್ಷ ಪುಟ್ಟರಾಜು, ಸದಸ್ಯರಾದ ಚಿಕ್ಕಣ್ಣ, ಮಹಾದೇವಯ್ಯ, ರವಿ, ನಾಗೇಂದ್ರ, ಕೆಂಪಸಿದ್ದ, ಸಿದ್ದರಾಜು, ಚಿಕ್ಕಣ ವರದರಾಜು, ಮಣಿಕಂಠ, ಸೋಮೇಶ್, ಎಚ್.ಕೆ. ನಾಗೇಶ್, ಮಹದೇವಸ್ವಾಮಿ, ನಾರಾಯಣ, ಚಲುವರಾಜು, ನಾಗೇಂದ್ರ, ಲೋಕೇಶ್, ಕುಮಾರ್, ರಘು, ಸುರೇಶ್, ರೇವಣ್ಣ, ಮಹೇಶ್, ಕುಮಾರ್, ಸಿದ್ದರಾಜು, ಶಿವಮೂರ್ತಿ, ಇನ್ನೂ ಮುಖಂಡರು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.