ಸರಗೂರು ತಾಲೂಕಿನ ಉಯ್ಯಂಬಳಿ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಹಬ್ಬದ ಮಾದರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸರಗೂರು: ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಊರ ಹಬ್ಬದ ಮಾದರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಂಬೇಡ್ಕರ್ ಸಮುದಾಯ ಭವನಕ್ಕೆ ತಳಿರು ತೋರಣ ಕಟ್ಟಿ ಮದುವಣಗಿತ್ತಿಯಂತೆ ಸಿಂಗರಿಸಿ ಪ್ರತಿ ಮನೆಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕಬಿನಿ ಜಲಾಶಯದ ಬಳಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಎನ್.ಬೇಗೂರು ರಸ್ತೆಯಲ್ಲಿ ಸಾಗಿ ಉಯ್ಯಂಬಳ್ಳಿ ಗ್ರಾಮ ತಲುಪಿತು. ಈ ವೇಳೆ ವಾದ್ಯಗೋಷ್ಠಿಗಳು ಮೊಳಗಿದವು.
ಶಾಸಕ ಅನಿಲ್ ಚಿಕ್ಕಮಾದು ಗ್ರಾಮಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅಂಬೇಡ್ಕರ್ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಶಿವಣ್ಣ, ಕಾಂಗ್ರೆಸ್ ಮುಖಂಡರಾದ ನಾಗರಾಜು, ಯಜಮಾನರಾದ ಮಲ್ಲಿಕಾರ್ಜುನಯ್ಯ, ಗ್ರಾಮದ ಖಜಾಂಚಿ ಯು.ಡಿ.ಚಂದ್ರಪ್ಪ, ಚಿಕ್ಕಯಜಮಾನರಾದ ಗಾಡಿ ಕೆಂಪರಾಜು, ಬಿ.ನಾಗಯ್ಯ, ಮಹದೇವಯ್ಯ, ನಿಂಗರಾಜು, ಶಿವಸಿದ್ದಯ್ಯ, ಮುತ್ತು, ಲೋಕೇಶ್, ಕೆ.ಎಂ.ಮಹೇಶ್, ಉಯ್ಯಂಬಳ್ಳಿಹುಂಡಿ ಪುಟ್ಟರಾಜು, ಶಂಭಯ್ಯ, ಆನಂದ್ ಇತರರು ಇದ್ದರು.