ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾದ ಗ್ರಾಮಸ್ಥರು. ಡಾ.ವಿನಯ್, ಸಂದೀಪ್ ಇದ್ದರು.  test
ಮೈಸೂರು

ಆರೋಗ್ಯ ಉಚಿತ ತಪಾಸಣೆ ಶಿಬಿರ

ಆಯಿರಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಯೋಜನೆ

ಹುಣಸೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಿಕ್ಕ ಹುಣಸೂರು ಘಟಕ, ಮೈಸೂರಿನ ನ್ಯೂಪ್ರಿಯದರ್ಶಿನಿ ಆಸ್ಪತ್ರೆ, ಪ್ರಣವ ಚಾರಿಟಬಲ್ ಟ್ರಸ್ಟ್ ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ

ಆಯಿರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ತಪಾಸಣೆ ಗೊಳಗಾದರು. ಶಿಬಿರಕ್ಕೆ ಚಾಲನೆ ನೀಡಿದ ವೈದ್ಯ ಡಾ.ವಿನಯ್ ಮಾತನಾಡಿ, ಕ್ಯಾನ್ಸರ್‌ನಂತಹ ಮಾರಕ ರೋಗಗಳು ಇಂದು ಜನ ಸಾಮಾನ್ಯರನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ಈ ಸಂದರ್ಭ ಆರೋಗ್ಯ ಜಾಗೃತಿ ಅಗತ್ಯವೆಂದರು.

ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಪರಿಸರ ಮಾಲಿನ್ಯ, ವೈಯಕ್ತಿಕ ಸ್ವಚ್ಛತೆಯಲ್ಲಿನ ಲೋಪದೋಷಗಳು ಮಾರಕ ಕಾಯಿಲೆ ಗಳಿಗೆ ಕಾರಣವಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಹಲವು ಸಂಘ ಸಂಸ್ಥೆಗಳು ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು. ಅಧ್ಯಕ್ಷತೆ ವಹಿಸಿದ್ದ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಉಮಾ ಮಾತನಾಡಿದರು. ಗ್ರಾಮದ ಮುಖಂಡ ಹೇಮರಾಜ್, ಸಂದೀಪ್, ಆಯಿರಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಧಿಕಾರಿ ಡಾ.ಶೋಭಾ, ಮುಖ್ಯಶಿಕ್ಷಕ ಪುರುಷೋತ್ತಮ, ಯೋಗ ಶಿಕ್ಷಕರಾದ ಕೆಂಪಣ್ಣ, ವಿಜಯಲಕ್ಷ್ಮೀ, ನಿಧಾ, ಗೌತಮ್, ಯೋಜನೆಯ ಬೋಳನಹಳ್ಳಿ ವಲಯ ಮೇಲ್ವಿಚಾರಕ ತೀರ್ಥರಾಮ, ಸೇವಾ ಪ್ರತಿನಿಧಿ ರಾಜೇಶ್ವರಿ, ಜ್ಞಾನ ವಿಕಾಸ ಸಂಯೋಜಕಿ ಮಣಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.