ವೀರಶೈವ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದಡದಹಳ್ಳಿ ಡಿ ಸಿ ಮಹೇಶ್ ಹಾಗೂ ಉಪಾಧ್ಯಕ್ಷ ಮನುಗನಹಳ್ಳಿ ಎಂ ಶಿವಣ್ಣ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. 
ಮೈಸೂರು

ವೀರಶೈವ ಸಹಕಾರ ಸಂಘದ ಚುನಾವಣೆ

ಎ. ಆರ್. ರಘುರಾಮ
ಪಟ್ಟಣದ ಎಂಡಿ ಸಿಸಿ ಬ್ಯಾಂಕ್ ಪಕ್ಕದಲ್ಲಿ ಇರುವ ವೀರಶೈವ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ದಡದಹಳ್ಳಿ ಡಿ ಸಿ ಮಹೇಶ ಹಾಗೂ ಉಪಾಧ್ಯಕ್ಷ ಮನುಗನಹಳ್ಳಿ ಎಂ ಶಿವಣ್ಣ ರವರನ್ನು ನಿರ್ದೇಶಕರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಸಭೆ ತಿರ್ಮಾನ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಾಗೂ ಸಂಘದ ಕಾರ್ಯದರ್ಶಿ ಶಿವಕುಮಾರ್ ಮತ್ತು ಸ್ವಾಮಿ ಘೋಷಣೆ ಮಾಡಿದರು.
ನಿಕಟಪೂರ್ವ ಅಧ್ಯಕ್ಷರಾದ ದಡದಹಳ್ಳಿ ಡಿ.ಜಿ. ಶಿವರಾಜು ಮಾತನಾಡಿ, ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಹಾಗೂ ನೂತನ ಆಡಳಿತ ಮಂಡಳಿಯ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆ. ಸಂಘದ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಳ್ಳುವಂತೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ನೂತನವಾಗಿ ಆಯ್ಕೆಯಾದ ವೀರಶೈವ ಸಹಕಾರ ಸಂಘದ ಅಧ್ಯಕ್ಷ ಡಿ.ಸಿ. ಮಹೇಶ್ ಮಾತನಾಡಿ, ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಎಲ್ಲ ನಿರ್ದೇಶಕರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
ಸಹಕಾರ ಸಂಘದ ನಿರ್ದೇಶಕರಾದ ಬಿದರಹಳ್ಳಿ ಮಾದಪ್ಪ, ಹಂಚೀಪುರ ಮಹದೇವಸ್ವಾಮಿ,ಹುಣಸಹಳ್ಳಿ ಚನ್ನಮಲ್ಲಪ್ಪ, ಶಿವಪುರ ಜಯಕುಮಾರ್,ಆನಗಟ್ಟಿ ಮಹದೇವಪ್ಪ, ಬಾಡಗ ವೀರಭದ್ರಪ್ಪ, ಹಂಚೀಪುರ ಕೆ ಎಸ್ ಸುಧಾನಟರಾಜು, ಬಾಡಗ ರುದ್ರಮ್ಮ ಪುಟ್ಟಪ್ಪ, ಕಾರ್ಯದರ್ಶಿಗಳಾದ ಶಿವಕುಮಾರ್, ಸ್ವಾಮಿ, ನಿರ್ದೇಶಕರಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆ ಎಸ್ ವೀರಭದ್ರಪ್ಪ, ಮಾಜಿ ಅಧ್ಯಕ್ಷರಾದ ಅಧ್ಯಕ್ಷ ಡಿ ಜಿ ಶಿವರಾಜು, ಗಣಪತಿ,ಎಸ್ ಎನ್ ಪ್ರಕಾಶ್,ಎಲ್ ಶಿವಣ್ಣ, ಮುಖಂಡರಾದ ಶ್ರೀಕಂಠ ಸ್ವಾಮಿ, ನಟರಾಜು,ನಿಜಪ್ಪ, ಪುಟ್ಟಣ್ಣ, ಇನ್ನೂ ಮುಖಂಡರು ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.