ಚಪ್ಪರದಹಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಗೀತಾ ವೆಂಕಟೇಶ್, ಉಪಾಧ್ಯಕ್ಷರಾಗಿ ಪುಟ್ಟಮ್ಮ ಸಿದ್ದಭೋವಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸಂಗೀತಾ ವೆಂಕಟೇಶ್, ಉಪಾಧ್ಯಕ್ಷರಾಗಿ ಪುಟ್ಟಮ್ಮ ಸಿದ್ದಭೋವಿ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಸಿಇಒ ಹುಚ್ಚಪ್ಪ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನಿರ್ದೇಶಕರು, ಮುಖಂಡರು ಸನ್ಮಾನಿಸಿ, ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಸಿ.ಎಸ್ ಕುಶಾಲ್, ಸಿ.ಪಿ ರಘು, ಜಗದೀಶ್, ಸಿ.ಪಿ ಸುರೇಶ, ಸಿ.ಪಿ ರವಿ, ಮುಕುಂದಚಾರಿ, ಅಶ್ವಥ್ ಕುಮಾರ್ ಸಿ, ಗೌರಮ್ಮ ನಂದೀಶ್, ಚಲುವನಾಯಕ, ಶೀಲಾನಾಗೇಂದ್ರ, ಸಿಬ್ಬಂದಿಗಳಾದ ಸಿ.ಕೆ ಮಂಜುನಾಥ್, ಎಂ.ಆರ್ ಯೋಗಾನಂದ, ಹೆಚ್.ಡಿ ಅವಿನಾಶ್, ಮುಖಂಡರಾದ ಚೌಡೇಗೌಡ, ರಾಮಕೃಷ್ಣೆಗೌಡ, ನಾಗರಾಜು, ಸಿ.ಕೆ ವೆಂಕಟೇಶ್, ಸಿ.ಎನ್ ಪ್ರಸನ್ನ ಕುಮಾರ್, ಸಿ.ಬಿ ಬಸವರಾಜು, ಸಿ.ಪಿ ಯೋಗೇಶ್, ಸಂತೋಷ್ ಪಾಟೀಲ್, ನಾಗರಾಜು, ಸಂತೋಷ ಪಾಟೀಲ್ ಸೇರಿದಂತೆ ಸದಸ್ಯರು ಇದ್ದರು.