ನಡಿಗೆ 
ಮೈಸೂರು

12ರಂದು ನಗರದಲ್ಲಿ ಜಾಗೃತಿ ಜಾಥಾ

ಮೈಸೂರು: ಇಂದಿನ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಅರಿವು ಮೂಡಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜ.12ರಂದು ಬೆಳಗ್ಗೆ 10.30ಕ್ಕೆ ನಗರದ ಪುರಭವನದಲ್ಲಿ ಸಮಾವೇಶ ಹಾಗೂ ಮಧ್ಯಾಹ್ನ 1ಕ್ಕೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಗರ ಯುವ ಘಟಕದ ಅಧ್ಯಕ್ಷ ಕೆ.ಆನಂದ್ ತಿಳಿಸಿದರು.
ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ, ಅಂದು ಪಕ್ಷದ ಸೇನಾನಿಗಳಿಗೆ ಸ್ಫೂರ್ತಿಯಾಗಿದ್ದ ಎಸ್.ಎಚ್.ಲಿಂಗೇಗೌಡರ ಜನ್ಮದಿನವೂ ಆಗಿದೆ. ಹೀಗಾಗಿ ಅವರನ್ನು ಸ್ಮರಿಸುವ ಉದ್ದೇಶದಿಂದಲೂ ಹಮ್ಮಿಕೊಂಡಿರುವ ಈ ಸಮಾವೇಶದಲ್ಲಿ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ಅಧ್ಯಕ್ಷ ಸಿ.ಎನ್.ದೀಪಕ್, ರಘು ಜಾಣಗೆರೆ ಮೊದಲಾದವರು ಪಾಲ್ಗೊಳ್ಳುವರು. ಸುಮಾರು ಎರಡು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.