ನಗರದಲ್ಲಿ ಆಯೋಜಿಸಿದ್ದ ‘ಸ್ವಸ್ಥ ಮೈಸೂರು’ ಆರೋಗ್ಯ ಜಾಗೃತಿ ಮತ್ತು ಪ್ರಚಾರ ಕಾಂರ್ುಕ್ರಮಕ್ಕೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಡಾ.ಬಿ.ಎಂ.ಸುಬ್ರಾಂು, ಡಾ.ಭರತ್ ಶೆಟ್ಟಿ, ಡಾ.ಪ್ರತಿಭಾ ಪೆರೇರಾ, ಡಾ.ಹನುಮಂತಾಚಾರ್ ಜೋಶಿ ಇತರರು ಇದ್ದರು. 
ಮೈಸೂರು

ಆರೋಗ್ಯಕರ ಸವಾಜ ನಿರ್ವಾಣಕ್ಕೆ ಜಾಗೃತಿ ಅಗತ್ಯ:ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ನಗರವನ್ನು ರೋಗಮುಕ್ತ ನಗರವನ್ನಾಗಿಸಲು ‘ಸ್ವಸ್ಥ ಮೈಸೂರು ಅಭಿಯಾನ
  • ಆರೋಗ್ಯ ಜಾಗೃತಿ, ಸ್ವಚ್ಛತೆ, ಉತ್ತಮ ಆಹಾರ ಪದ್ಧತಿ, ವ್ಯಾಯಾಮ ರೂಢಿಸಿಕೊಳ್ಳಬೇಕು
ಮೈಸೂರು:ಆರೋಗ್ಯಕರ ಸವಾಜ ನಿರ್ವಾಣಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ನಗರದ ಶಾರದಾವಿಲಾಸ ಔಷಧ ವಿಜ್ಞಾನ ಕಾಲೇಜಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಡೇಶನ್, ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಸ್ಥ ಮೈಸೂರು ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಸ್ಥ ಮೈಸೂರು’ ಆರೋಗ್ಯ ಜಾಗೃತಿ ಮತ್ತು ಪ್ರಚಾರ ಕಾಂರ್ುಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ನಗರವನ್ನು ರೋಗಮುಕ್ತ ನಗರವನ್ನಾಗಿಸಲು ‘ಸ್ವಸ್ಥ ಮೈಸೂರು ಅಭಿಯಾನ’ ಮಹತ್ವದ ಹೆಜ್ದೆಯಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಸ್ವಸ್ಥ ಮೈಸೂರು ಎಂಬ ಹೆಸರಿನ ಅರ್ಥವೇ ಮೈಸೂರು ನಗರವನ್ನು ಸಂಪೂರ್ಣ ಆರೋಗ್ಯಕರವಾಗಿ ಇಡುವುದು. ಆರೋಗ್ಯ ಜಾಗೃತಿ, ಸ್ವಚ್ಛತೆ, ಉತ್ತಮ ಆಹಾರ ಪದ್ಧತಿ ಹಾಗೂ ನಿಯಮಿತ ವ್ಯಾಂಾಮದ ಮೂಲಕ ಉತ್ತಮ ಜೀವನಶೈಲಿಂುನ್ನು ರೂಢಿಸಿಕೊಳ್ಳಬಹುದು ಎಂದು ಹೇಳಿದರು.
ಆರೋಗ್ಯ ಜಾಗೃತಿ ಕಾಂರ್ುಕ್ರಮಗಳಲ್ಲಿ ಸಕ್ರಿಂುವಾಗಿ ಯುವಜನರು ಭಾಗವಹಿಸಬೇಕು. ತಮ್ಮ ಸುತ್ತಮುತ್ತಲ ಜನರಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎಂ.ಸುಬ್ರಾಂು, ಸ್ವಸ್ಥ ಮೈಸೂರು ರಾಂುಭಾರಿ ಡಾ.ಭರತ್ ಶೆಟ್ಟಿ , ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ವೃದ್ಧಾರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಪ್ರತಿಭಾ ಪೆರೇರಾ, ಶಾರದಾ ವಿಲಾಸ ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಇತರರು ಇದ್ದರು.