ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ಮಲ್ಲಕಂಬ ಶಿಕ್ಷಕರಾದ ಶ್ರೀ ದುಂಡಪ್ಪ ದಾಸಣ್ಣ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದರು. 
ಮೈಸೂರು

ಮಲ್ಲಕಂಬ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಲೋಕೇಶ್ ಮನು. ಡಿ
ನಂಜನಗೂಡು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು, ನಗರ ಜಿಲ್ಲೆ ಹಾಗೂ ಕರ್ನಾಟಕ ಅಮೆಚೂರ್ ಮಲ್ಲಕಂಬ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡೋತ್ಸವದಲ್ಲಿ ಸುತ್ತೂರು ಜೆಎಸ್‌ಎಸ್ ಶಾಲೆಯ 16 ಮಲ್ಲಕಂಬ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವೈಯಕ್ತಿಕ ಸ್ಪರ್ಧೆ: ಮನೋಜ್ ಪ್ರಥಮ ಸ್ಥಾನ, ಸಂದೀಪ್ ಮತ್ತು ಆಯುಷ್ ದ್ವಿತೀಯ ಸ್ಥಾನ, ಸಮರ್ಥ್ ತೃತೀಯ ಸ್ಥಾನ ಗಳಿಸಿದ್ದಾರೆ.
ತಂಡ ಸ್ಪರ್ಧೆ: 14 ವರ್ಷದೊಳಗಿನ ಬಾಲಕರು ಪ್ರಥಮ ಸ್ಥಾನ ಹಾಗೂ 14 ವರ್ಷ ಮೇಲ್ಪಟ್ಟ ಬಾಲಕರೂ ಪ್ರಥಮ ಸ್ಥಾನ ಗಳಿಸಿದ್ದಾರೆ. 14 ವರ್ಷ ಮೇಲ್ಪಟ್ಟ ಬಾಲಕಿಯರು ತೃತೀಯ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ತರಬೇತಿ ನೀಡಿದ ಮಲ್ಲಕಂಬ ಶಿಕ್ಷಕರಾದ ಶ್ರೀ ದುಂಡಪ್ಪ ದಾಸಣ್ಣ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದರು.