ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪ್ರಗತಿಪರ ರೈತರು ಹಾಗೂ ಸಾಧಕ ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪ್ರಗತಿಪರ ರೈತರು ಹಾಗೂ ಸಾಧಕ ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾದಾಪುರ ಕೆಂದಾವರೆ ಪದ್ಮಭೂಷಣ ಮಹದೇವಪ್ಪ ಸೇವಾ ಟ್ರಸ್ಟ್ (ಎಂಕೆಪಿಎಂಎಸ್‌ಟಿ) ಸಹಯೋಗದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆ ಗ್ರಾಮ ಚಿಕ್ಕತಾಯಮ್ಮ, ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದ ಶಿವಮ್ಮ(ಭತ್ತದ ಬೆಳೆ), ಬಾಳೆ ಬೆಳೆಯಲ್ಲಿ ಚಾಮರಾಜನಗರ ತಾಲೂಕಿನ ಕುಂಬಾರಗುಂಡಿ ಗ್ರಾಮದ ರತ್ನಮ್ಮ, ರೇಷ್ಮೆ ಬೆಳೆಯಲ್ಲಿ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ ಎಂ.ಸಿ.ಗುಣಸಾಗರಿ ಹಾಗೂ ಮಹಿಳಾ ಉದ್ಯಮಿ ಪ್ರಶಸ್ತಿಯನ್ನು ಮೈಸೂರು ತಾಲೂಕಿನ ದೂರ ಗ್ರಾಮದ ಎಸ್. ಆಶ್ವಿನಿ ಅವರಿಗೆ ನೀಡಲಾಯಿತು. \
ಚಾಮರಾಜನಗರ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಬೆಳೆ ಬೆಳೆದ 10 ರೈತರಿಗೆ ರೈತರಿಗೆ ಯಳಂದೂರು ತಾಲೂಕು ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಶಸ್ತಿ ನೀಡಲಾಯಿತು.
ಬಾಳೆ ಬೆಳೆಯಲ್ಲಿ ಯಳಂದೂರು ತಾಲೂಕು ಗೌಡಹಳ್ಳಿಯ ಶಿವಮಲ್ಲಪ್ಪ (ಪ್ರ), ಯಳಂದೂರು ತಾಲೂಕು ಮಲಾರಪಾಳ್ಯದ ಎಂ.ಗುರುಸ್ವಾಮಿ(ದ್ವಿ), ಮುಸುಕಿನ ಜೋಳ ಬೆಳೆಯಲ್ಲಿ ಹನೂರು ತಾಲೂಕಿನ ಲೋಕ್ಕನಹಳ್ಳಿಯ ವೆಂಕಟೇಶ್(ಪ್ರ), ಆಂಡಿಪಾಳ್ಯದ ಎಂ.ಮೂರ್ತಿ( ದ್ವಿ), ಕಬ್ಬು ಬೆಳೆಯಲ್ಲಿ ಕೊಳ್ಳೇಗಾಲ ತಾಲೂಕಿನ ಅಣಗಲಿಯ ಎಂ.ಮಾದಯ್ಯ(ಪ್ರ), ಸುರಪುರ ಗ್ರಾಮದ ಎಲ್.ರವಿ(ದ್ವಿ), ಟೊಮ್ಯಾಟೊ ಬೆಳೆಯಲ್ಲಿ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ಪಿ. ಸಿದ್ದರಾಜು(ಪ್ರ), ಕೆಬ್ಬೆಪುರ ಗ್ರಾಮದ ಎಂ.ಪ್ರಭುಸ್ವಾಮಿ(ದ್ವಿ), ಪೋಲ್ ಬೀನ್ಸ್ ಬೆಳೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಕುರುಬಗೇರಿಯ ಕೃಷ್ಣಗೌಡ(ಪ್ರ), ನೇನೆಕಟ್ಟೆಯ ಕೆ.ಬಸವಣ್ಣ(ದ್ವಿ) ಬಹುಮಾನ ನೀಡಲಾಯಿತು.