ಹುಣಸೂರು ನಗರದ ಶಾಸ್ತ್ರೀ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿ ಗಳಿಸಿದರು.
ಹುಣಸೂರು: ಮೈಸೂರಿನ ಜಿ.ಕೆ.ವಿನ್ಯಾಸ ಮತ್ತು ಶ್ರೀಕೃಷ್ಣ ಯೋಗಾಸ್ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಯೋಗ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ನಗರದ ಶಾಸ್ತ್ರೀ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿದ್ಯಾಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿನಿ ಧೃತಿ ದ್ವಿತೀಯ ಸ್ಥಾನ ಗಳಿಸಿದ್ದರೆ, 5ನೇ ತರಗತಿಯ ಡೇನಿಷ್(ದ್ವಿತೀಯ), 6ನೇ ತರಗತಿಯ ಗಾನವಿ ತೃತೀಯ, 6ನೇ ತರಗತಿಯ ಜತಿನ್ ನಾಲ್ಕನೇ ಸ್ಥಾನ, 4ನೇ ತರಗತಿಯ ಚಿರಾಯು ಐದನೇ ಸ್ಥಾನ, 10ನೇ ತರಗತಿಯ ಗುರುಪ್ರಸಾದ್ 5ನೇ ಸ್ಥಾನ, ಚಿದಾನಂದ್ ದ್ವಿತೀಯ ಸ್ಥಾನ, ಲಿಖಿತ್ 5ನೇ ಸ್ಥಾನ ಗಳಿಸುವ ಮೂಲಕ ವಿದ್ಯಾಸಂಸ್ಥೆ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಮತ್ತು ತರಬೇತುದಾರರನ್ನು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ, ಪ್ರಾಂಶುಪಾಲ ರವಿಶಂಕರ್ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.