ಮೈಸೂರು: ಗೋಕುಲಂ 3ನೇ ಹಂತದ ಲಯನ್ಸ್ ಸೇವಾನಿಕೇತನ ಶಾಲೆ ಆವರಣದಲ್ಲಿದ್ದ ಗಂಧದ ಮರವನ್ನು ಗುರುವಾರ ರಾತ್ರಿ ಕಳ್ಳರು ಕದಿಯಲು ವಿಫಲ ಯತ್ನ ನಡೆಸಿದ್ದಾರೆ.
ಶಾಲೆಯ ಆವರಣದಲ್ಲಿ 15 ರಿಂದ 20 ವರ್ಷದ ಗಂಧದ ಮರವೊಂದು ಇತ್ತು. ಗುರುವಾರ ಮಧ್ಯರಾತ್ರಿ ಕಳ್ಳರು ಮರವನ್ನು ಕತ್ತರಿಸುತ್ತಿದ್ದ ಸದ್ದು ಕೇಳಿದಾಗ ಎಚ್ಚರಗೊಂಡ ಭದ್ರತಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿದಾಗ ಕತ್ತರಿಸಿದ ಮರವನ್ನು ಕಳ್ಳರು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.