ಮೈಸೂರು ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಂೋಜಿಸಿದ್ದ ‘ಬಹುತ್ವದ ಭಾರತವನ್ನು ಛಿದ್ರಗೊಳಿಸುತ್ತಿರುವ ಸರ್ಕಾರಗಳ ದಮನಕಾರಿ ಹುನ್ನಾರ ಖಂಡಿಸಿ ಶೋಷಿತ ಸಮುದಾಂುಗಳ ಐಕತ್ಯಾ ಸವಾವೇಶ’ದಲ್ಲಿ ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ಮಾತನಾಡಿದರು. ಡಾ.ಜೆ.ಸೋಮಶೇಖರ್, ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು ಹಾಗೂ ಇತರರು ಇದ್ದರು.
ಮೈಸೂರು: ಬಹುತ್ವ ಭಾರತವನ್ನು ಛಿದ್ರಗೊಳಿಸುವ ಪ್ರಂುತ್ನ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಭಿನ್ನಾಭಿಪ್ರಾಂುಗಳನ್ನೆಲ್ಲ ಬದಿಗೊತ್ತಿ ಒಗ್ಗಟ್ಟಾಗಿ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ಹೇಳಿದರು.
ಅಂಬೇಡ್ಕರ್ ಜಂುಂತಿ ಪ್ರಯುಕ್ತ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಂೋಜಿಸಿದ್ದ ‘ಬಹುತ್ವದ ಭಾರತವನ್ನು ಛಿದ್ರಗೊಳಿಸುತ್ತಿರುವ ಸರ್ಕಾರಗಳ ದಮನಕಾರಿ ಹುನ್ನಾರ ಖಂಡಿಸಿ ಶೋಷಿತ ಸಮುದಾಂುಗಳ ಐಕತ್ಯಾ ಸವಾವೇಶ’ವನ್ನು ಉದ್ಘಾಟಿಸಿ ವಾತನಾಡಿದರು.
ಶಿಕ್ಷಣವೇ ಶೋಷಿತ ಸಮುದಾಂುಗಳ ವಿಮೋಚನೆಂು ಪ್ರಧಾನ ದಾರಿ ಎಂದು ಅಂಬೇಡ್ಕರ್ ಒತ್ತಿ ಹೇಳಿದ್ದರು. ಹಾಗಾಗಿ ಮುಂದಿನ ಪೀಳಿಗೆಗೆ ಶಿಕ್ಷಣದ ಮಹತ್ವ ತಿಳಿಸುವ ಕಾರ್ಯ ಆಗಬೇಕು. ಶಿಕ್ಷಣದಿಂದಲೇ ವಾನಸಿಕ ದಾಸ್ಯದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಚಾರದಲ್ಲಿ ನಮ್ಮವರು ಅನಿಸಿಕೊಳ್ಳುತ್ತಾರೆ. ಯಾರಿಗೂ ಅವರು ನಮ್ಮವರಲ್ಲ ಎಂದು ಅನಿಸುವುದಿಲ್ಲ. ಕಾರಣ, ಅವರು ದೇಶದ ಪ್ರತಿಂೊಬ್ಬ ಪ್ರಜೆಂು ಹಕ್ಕುಗಳನ್ನು ಕಾಪಾಡಲು ಮತ್ತು ಸವಾನತೆ ತರುವುದಕ್ಕೆ ಜೀವಿತವನ್ನೇ ಅರ್ಪಿಸಿದ್ದಾರೆ. ಅವರ ವ್ಯಕ್ತಿತ್ವ ತಾಯಿಂು ಹೃದಂುದಂತೆ ಮಮತೆಂುೂ, ಅನ್ಯಾಂುದ ವಿರುದ್ಧ ಹೋರಾಡುವ ದೃಢಸಂಕಲ್ಪವೂ ಹೊಂದಿತ್ತು ಎಂದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಅವರ ವಿಚಾರ, ಆಶಯಗಳನ್ನು ಅರಿತುಕೊಂಡು ಚಳವಳಿಂುನ್ನು ಮುಂದುವರಿಸಿ, ಶೋಷಿತ ಸಮುದಾಂುಗಳನ್ನು ಜಾಗೃತಗೊಳಿಸುವ ಅಗತ್ಯವಿದೆ. ಇಂದಿನ ಸವಾಜದಲ್ಲಿ ನೈಜ ಬದುಕಿಗಿಂತ ಕೃತಕ ಬದುಕು ಹೆಚ್ಚಾಗುತ್ತಿದ್ದು, ಮನುಷ್ಯನ ಜೀವನ ಅಶಾಂತಿಂು ದಿಕ್ಕಿಗೆ ಸಾಗುತ್ತಿದೆ. ಂುುದ್ಧಗಳ ಭೀಕರತೆ, ಕೆಳಸ್ತರದ ಜನರ ಸಂಕಷ್ಟಗಳು ಹೆಚ್ಚುತ್ತಿದ್ದು, ವಿದ್ಯಾವಂತರಿಗೂ ಉದ್ಯೋಗದ ಅಭಾವದಿಂದ ಸಂಕಷ್ಟ ಎದುರಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಂತ್ರಜ್ಞಾನದಲ್ಲಿ ನಾವು ವೇಗವಾಗಿ ಮುಂದುವರೆದಿದ್ದರೂ, ವಾನವೀಂುತೆ ಮತ್ತು ಮನಸ್ಸಿನ ಅಭಿವೃದ್ಧಿಂುಲ್ಲಿ ಹಿಂದೆ ಬಿದ್ದಿದ್ದೇವೆ. ಸುಳ್ಳನ್ನು ಸತ್ಯವಾಗಿಸುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಜಾಗೃತಿ ವಹಿಸಿ ಸತ್ಯವನ್ನು ಉಳಿಸುವ ಹೊಣೆಗಾರಿಕೆ ಸವಾಜದ ಮೇಲಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಖಜಾಂಚಿ ಬಿ.ಡಿ.ಶಿವಬುದ್ಧಿ, ಪ್ರಮುಖರಾದ ಆರ್.ಸೋಮಣ್ಣ ಕುಪ್ಪೇಗಾಲ, ಚೋರನಹಳ್ಳಿ ಶಿವಣ್ಣ, ಕಲ್ಲಹಳ್ಳಿ ಕುಮಾರ್ ಹಾಗೂ ಇತರರು ಇದ್ದರು.