ನಗರದ ಜಯಲಕ್ಷ್ಮಿಪುರಂನಲ್ಲಿರುವ ಸೇಂಟ್ ಜೋಸ್ೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕಲಾಸೃಷ್ಟಿ ೆಸ್ಟ್ ಕಾರ್ಯಕ್ರಮಕ್ಕೆ ಎಡ್ವರ್ಡ್ ವಿಲಿಯಂ ಸಲ್ಡಾನ್ಹ ಚಾಲನೆ ನೀಡಿದರು. ನವೀನ್ ಕುಮಾರ್, ಸೆಬಿ ಮಾವೇಲಿ, ಪ್ರಿಯಾ ಮ್ಯಾಥ್ಯೂ, ಡಾ.ಆಶಾ ಪಿ.ಪಥ್ರೋಸ್, ಡಾ.ಎ.ಟಿ ಚಲುವರಾಜಸ್ವಾಮಿ ಇದ್ದರು.
ಮನುಷ್ಯ ಆರೋಗ್ಯವಂತನಾಗಿರಲು, ಉತ್ತಮ ಜೀವನ ನಡೆಸಲು ಕಲೆ ಸಹಕಾರಿಯಾಗಲಿದೆ. ಕಲೆ ಎಲ್ಲರನ್ನು ಒಟ್ಟುಗೂಡಿಸುವ, ಮಾನವೀಯತೆ ಸಾರುವ ಕೆಲಸ ಮಾಡುತ್ತದೆ ಎಂದು ಮೈಸೂರು ಧರ್ಮಪ್ರಾಂತ್ಯ ಶೈಕ್ಷಣಿಕ ಸೊಸೈಟಿ(ಎಂಡಿಇಎಸ್) ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ್ಹ ಹೇಳಿದರು.
ನಗರದ ಜಯಲಕ್ಷ್ಮೀಪುರಂನ ಸೇಂಟ್ ಜೋಸ್ೆ ಕಾಲೇಜಿನಲ್ಲಿ ಬಿ.ಇಡಿ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 2026ರ ರಾಜ್ಯ ಮಟ್ಟದ ಅಂತರ ಬಿ.ಇಡಿ ಕಾಲೇಜುಗಳ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಲಾಸೃಷ್ಟಿ ೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದ ಹುಟ್ಟಿನಿಂದಲೇ ಕಲೆ ಅದರ ಜತೆ ಜತೆಗೆ ಜೀವ ತಳೆದಿದೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವ ಜಂತುಗಳು, ಪಕ್ಷಿಗಳಲ್ಲಿ ಸಂಗೀತ ಇದೆ. ಅದನ್ನು ಸ್ಫೂರ್ತಿಯನ್ನಾಗಿಸಿಕೊಂಡು ಸಂಗೀತ, ನೃತ್ಯದಂತಹ ಕಲಾ ಪ್ರಾಕಾರಗಳನ್ನು ಕಂಡುಕೊಂಡಿದ್ದೇವೆ. ಕಲೆ ಎಂಬುವುದು ಮನುಷ್ಯನಲ್ಲಿ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದರು.
ಕಲೆ ಸೃಜನಾತ್ಮಕತೆಯನ್ನು ಹೊಂದಿದೆ. ಕಲೆ ಎಂಬುದು ಮನುಷ್ಯನ ಅವಶ್ಯಕತೆಗಳಿಂದ ಹುಟ್ಟಿಕೊಂಡಿದೆ. ಆಹಾರ, ವಸತಿ, ಬಟ್ಟೆಯನ್ನು ನಾವು ಕಲೆಯನ್ನಾಗಿ ರೂಪಿಸಿಕೊಂಡಿದ್ದೇವೆ. ಇವೆಲ್ಲವೂ ಹಿಂದೆ ಅವಶ್ಯಕತೆಯಿದ್ದ ಅಂಶಗಳು, ಇಂದು ಕಲಾಪ್ರಕಾರವಾಗಿವೆ. ಕಲಾಪ್ರಕಾರಗಳ ಮಹತ್ವ ತಿಳಿದುಕೊಂಡರೆ, ಮನುಷ್ಯನಿಗೆ ಸಂಗೀತದ ಮೇಲೆ ಪ್ರೇಮ ಹೆಚ್ಚಾಗಲಿದೆ ಎಂದರು.
ಕಲಾಸೃಷ್ಟಿ 2026ರ ಅಂಗವಾಗಿ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ನಾಟ್ಯ ವಿಸ್ಮಯ, ಸ್ಮರಾಂಜಲಿ, ನೃತ್ಯಾಂಜಲಿ, ರಂಗೋಲಿ ಸ್ಪರ್ಧೆ, ಸಮೂಹ ಗೀತ ಗಾಯನ ಸ್ಪರ್ಧೆಗಳು ಹಾಗೂ ಸಾಹಿತ್ಯಕ ಕಾರ್ಯಕ್ರಮಗಳಾದ ಕಾವ್ಯ ರಚನೆ, ಕಥಾ ಲಿಖಿತ ಮತ್ತು ಭಾಷಣ ಸ್ಪರ್ಧೆಗಳು ನಡೆದವು. ನಾನಾ ಜಿಲ್ಲೆಗಳಿಂದ ಬಿ.ಇಡಿ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಎಂಡಿಇಎಸ್ ಖಜಾಂಚಿ ಎ.ನವೀನ್ ಕುಮಾರ್, ಸಿಇಒ ಸೆಬಿ ಮಾವೇಲಿ, ಪ್ರಾಂಶುಪಾಲರಾದ ಪ್ರಿಯಾ ಮ್ಯಾಥ್ಯೂ, ಸಂಯೋಜಕಿ ಡಾ.ಆಶಾ ಪಿ.ಪಥ್ರೋಸ್, ಡಾ.ಎ.ಟಿ ಚಲುವರಾಜಸ್ವಾಮಿ ಮತ್ತಿತರರು ಇದ್ದರು.