ಮೂಗೂರು ಬಸ್ ನಿಲ್ದಾಣದ ರತ್ನ ಕಂಫರ್ಟ್ ಮುಂಭಾಗದಲ್ಲಿನ 40 ಅಡಿ ಎತ್ತರದ ಅಪ್ಪು ಭಾವಚಿತ್ರಕ್ಕೆ ಗೌಡರ ಪುಟ್ಪು ರವರು ಪುಷ್ಪಾರ್ಚನೆ ಮಾಡಿದರು.
ಮೂಗೂರು: ಗ್ರಾಮದ ದೊಡ್ಮನೆ ಅಪ್ಪು ಅಭಿಮಾನಿಗಳಿಂದ ಇಂದು ಚಿತ್ರ ನಟ ಡಾ. ಪುನೀತ್ ರಾಜಕುಮಾರ್ ರವರ 51 ನೇ ವರ್ಷದ ಹುಟ್ಟುಹಬ್ಬವನ್ನು ಮೂಗೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದರು.
ಮೂಗೂರು ಬಸ್ ನಿಲ್ದಾಣದ ರತ್ನ ಕಂಫರ್ಟ್ ಮುಂಭಾಗದಲ್ಲಿನ 40 ಅಡಿ ಎತ್ತರದ ಅಪ್ಪು ಭಾವಚಿತ್ರಕ್ಕೆ ಗೌಡರ ಪುಟ್ಪು ರವರು ಪುಷ್ಪಾರ್ಚನೆ ಮಾಡಿದರು.
ಬಳಿಕ ಎಂ ಎಂ ಜಗದೀಶ್ ಮಾತನಾಡಿ ನಮ್ಮ ನೆಚ್ಚಿನ ನಾಯಕ ಪುನೀತ್ ರಾಜ್‍ಕುಮಾರ್ ರವರು ನಮ್ಮನ್ನು ಬಿಟ್ಟು ಅಗಲಿ ಇಂದಿಗೆ ನಾಲ್ಕು ವರ್ಷಗಳು ಕಳೆದರೂ ಅವರು ಎಲ್ಲಾ ಅಭಿಮಾನಿಗಳ ಮನದಲ್ಲಿ ಜೀವಂತವಾಗಿ ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ನಾವು ಸಹಾ ನಮ್ಮ ಕೈಲಾದ ಸೇವೆಯನ್ನು ಮಾಡಲು ಮುಂದಾಗಿದ್ದೇವೆ ಅಪ್ಪು ರವರ ಸೇವಾ ಮನೋಭಾವ ಜನರ ಮನದಲ್ಲಿ ಇಂದಿಗೂ ಮುಂದೆಯೂ ಚಿರವಾಗಿ ಉಳಿಯಲಿದೆ ಎಂದರು .
ಪ್ರತಿ ವರ್ಷ ಅಪ್ಪು ರವರ ಹುಟ್ಟು ಹಬ್ಬದ ಅಂಗವಾಗಿ ವಿಧವಿಧವಾದ ಸೇವಾ ಕಾರ್ಯಗಳನ್ನು ಹಮ್ಮಿಕೊಳುವುದರ ಮೂಲಕ ಅವರ ಮಾರ್ಗದರ್ಶನವನ್ನು ಅನುಸರಿಸುತ್ತಾ ಬಂದಿದ್ದೇವೆ ಅವರಂತೆ ಇಂದಿನ ಯುವ ಪೀಳಿಗೆ ಸೇವ ಮನೋಭಾವನೆ ಬೆಳೆಸಿಕೊಳ್ಳಲು ಮುಂದಾಗ ಬೇಕಿದೆ ಎಂದರು. ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖೋ ಖೋ ಕ್ರೀಡೆಯಲ್ಲಿ ಖ್ಯಾತಿ ಪಡೆದ ಕುರುಬೂರಿನ ಕುಮಾರಿ ಚೈತ್ರ ರವರನ್ನು ದೊಡ್ಮನೆ ಅಪ್ಪು ಅಭಿಮಾನಿಗಳ ಬಳಗ ಹಾಗೂ ಗೌಡರ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ಗೌಡ್ರು ಪುಟ್ಟಣ್ಣ, ಭವ್ಯ,ಶರತ್ ಕುಮಾರ್, , ಎಂ.ಎಂ, ಜಗದೀಶ್, ಚೇತನ್ ಪುಟ್ಟ ಮಾದಯ್ಯ, , ಚೇತನ್, , ಮುಖಂಡರಾದ ಭರತ್ ಕುಮಾರ್ ಮಹೇಶ್, ರಾಜು, ಸಿದ್ದರಾಜು ಚಂದು,.ಕಿರಣ್ ಕುಮಾರ್ ಸೇರಿದಂತೆ ಇತರರು ಇದ್ದರು..