ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ವಿದ್ಯುತ್ ಕಂಬ ಸಾಗಿಸುತ್ತಿರುವ ಕಾರ್ಮಿಕರು. 
ಮೈಸೂರು

ಇಪ್ಪತ್ತೈದು ಕಾರ್ಮಿಕರ ಸಾಹಸಕ್ಕೆ ಮೆಚ್ಚುಗೆ

ಶ್ರೀ ಸಿಡಿಲು ಮಲ್ಲಿಕಾರ್ಜುನ ಬೆಟ್ಟಕ್ಕೆ 43 ವಿದ್ಯುತ್ ಕಂಬ, ತಂತಿ ಸಾಗಿಸುವ ಶ್ರಮಿಕರು

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ 43 ವಿದ್ಯುತ್ ಕಂಬಗಳು ಹಾಗೂ ಅಗತ್ಯ ವಿದ್ಯುತ್ ತಂತಿಗಳನ್ನು 3108 ಮೆಟ್ಟಿಲುಗಳ ಮೂಲಕ ಮೇಲಕ್ಕೆ ಸಾಗಿಸುವ ಕಾರ್ಯದಲ್ಲಿ ತೊಡಗಿರುವ 25 ಕಾರ್ಮಿಕರ ಶ್ರಮ ಮತ್ತು ಸಾಹಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೊರಗುತ್ತಿಗೆದಾರ ರವಿ ಅವರ ನೇತೃತ್ವದಲ್ಲಿ ಶಶಿ ಮತ್ತು ಕುಮಾರ್ ಅವರ ತಂಡದ ಕಾರ್ಮಿಕರು ಈ ಕಠಿಣ ಕಾರ್ಯವನ್ನು ಕೈಗೊಂಡಿದ್ದಾರೆ. ಬೆಟ್ಟದಪುರದ ದೀವಟಿಗೆ ಉತ್ಸವ ಹಾಗೂ ಫೆಬ್ರವರಿಯಲ್ಲಿ ನಡೆಯಲಿರುವ ಜಾತ್ರೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ.

ಮುಜರಾಯಿ ಇಲಾಖೆಯಿಂದ ಸೆಸ್ಕ್ ಇಲಾಖೆಗೆ ಕಾಮಗಾರಿಯ ಹಣ ಪಾವತಿಯಾಗಿದ್ದು, ಹೊರಗುತ್ತಿಗೆ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ಕಡಿದಾದ ಮೆಟ್ಟಿಲುಗಳನ್ನು ಏರಿ ವಿದ್ಯುತ್ ಕಂಬಗಳನ್ನು ಮೇಲಕ್ಕೆ ಸಾಗಿಸುವುದು ಸುಲಭದ ಕೆಲಸವಲ್ಲ. ಇಂತಹ ಸವಾಲಿನ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಪರಿಶ್ರಮಕ್ಕೆ ಬೆಟ್ಟದಪುರದ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.