ಬನ್ನೂರಿನ ಅತಿಥಿಗೃಹದಲ್ಲಿ ಆಯೋಜಿಸಿದ್ದ ಬಸವರಾಜ್ ಶಿಡ್ಡಪ್ಪ ಕುಂಬಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘ ಮೂಲಸಂಘಟನೆ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮಾತನಾಡಿದರು. ವಿಶ್ವನಾಥ್, ಕೃಷ್ಣ, ಜಯರಾಂ, ಪಾರ್ಥ ಇತರರು ಇದ್ದರು. 
ಮೈಸೂರು

ಉತ್ತರ ಕರ್ನಾಟಕದ ದಿಟ್ಟ ಹೋರಾಟಗಾರ ಅಪ್ಪಾಜಿ

ರೈತ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಬಣ್ಣನೆ

ಬನ್ನೂರು: ಉತ್ತರ ಕರ್ನಾಟಕದ ರೈತರ ಪರ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿ ನಿಂತು ಜನಸಾಮಾನ್ಯರಿಂದ ಅಪ್ಪಾಜಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬಸವರಾಜ್ ಶಿಡ್ಡಪ್ಪ ಕುಂಬಾರ್ ಉತ್ತಮ ರೈತ ಹೋರಾಟಗಾರ ಎಂದು ರಾಜ್ಯ ರೈತ ಸಂಘ ಮೂಲಸಂಘಟನೆ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ತಿಳಿಸಿದರು.

ಪಟ್ಟಣದ ಅತಿಥಿಗೃಹದಲ್ಲಿ ಆಯೋಜಿಸಿದ್ದ ಬಸವರಾಜ್ ಶಿಡ್ಡಪ್ಪ ಕುಂಬಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಬಸವರಾಜ್ ಅವರೊಂದಿಗೆ ಅವರೊಂದಿಗೆ ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಅಪಾರ ಜಲಸಂಪನ್ಮೂಲ ಹೊಂದಿದ್ದರೂ ಪರಿಸರ ಸಂಪನ್ಮೂಲವಿಲ್ಲ ಎಂದು ರೈತರೊಂದಿಗೆ ಹೋರಾಟವನ್ನು ಮಾಡಿದ್ದರ ಫಲವಾಗಿ ವಿಜಯಪುರದಲ್ಲಿ 6 ಲಕ್ಷ ಗಿಡನೆಡುವ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯಿಂದ ಚಾಲನೆ ದೊರೆಯಿತು ಎಂದರು.

ಮುಂದಿನ ದಿನಗಳಲ್ಲಿಯೂ ಸಂಘಟನೆಯಲ್ಲಿ ಯಾರೇ ಮರಣ ಹೊಂದಿದರೂ ಅವರೊಂದಿಗೆ ಸಂಘಟನೆ ನಿಲ್ಲಲಿದೆ. ಅವರ ಕುಟುಂಬಕ್ಕೆ ಸಂಘಟನೆಯು ನೆರವಾಗಲಿದೆ ಎಂದು ನಾರಾಯಣ್ ತಿಳಿಸಿದರು.

ಬೆಟ್ಟಹಳ್ಳಿ ಶಿವರಾಂ ಹಾಗೂ ಹುನುಗನಹಳ್ಳಿ ವಿಶ್ವನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ವನಾಥ್, ತಿರುಪತಿ ಬಂಡಿ ಒಡ್ಡರ್, ತಮ್ಮಯ್ಯ, ಯೋಗೇಶ್, ಶಿವರಾಂ, ಕೃಷ್ಣ, ರವೀಂದ್ರ, ಜಯರಾಂ, ಪಾರ್ಥ, ಪಾಪಣ್ಣ, ಶಿವಣ್ಣ, ನಾಗೇಶ್, ಚೇತನ್, ನಿಂಗೇಗೌಡ, ಬೀಡನಹಳ್ಳಿ ಕುಮಾರ್, ಮೇಗಲಕೊಪ್ಪಲಿನ ರಂಗಸ್ವಾಮಿ ಇತರರು ಇದ್ದರು.