ಕೆ.ಆರ್.ನಗರದಲ್ಲಿ ಶ್ರೀ ಸತ್ಯಸಾಯಿ ಬಾಬಾ ಉತ್ಸವ ಮೂರ್ತಿ ಮೆರವಣಿಗೆ ಜರುಗಿತು.  
ಮೈಸೂರು

ಶ್ರೀ ಸತ್ಯಸಾಯಿ ಬಾಬಾ ದೇಗುಲದಲ್ಲಿ ವಾರ್ಷಿಕೋತ್ಸವ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಅಲಂಕೃತ ಬೆಳ್ಳಿ ರಥದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ಮೆರವಣಿಗೆ
  • ದೇಗುಲ ನಿರ್ಮಾಣಕ್ಕೆ ಅನುದಾನ ಭರವಸೆ
ಕೆ.ಆರ್.ನಗರ: ಪಟ್ಟಣದ ಆಂಜನೇಯ ಬಡಾವಣೆಯ ಬಜಾರ್ ರಸ್ತೆಯಲ್ಲಿರುವ ಪ್ರಸಿದ್ಧ ದೇವಾಲಯ ಶ್ರೀ ಸತ್ಯಸಾಯಿ ಬಾಬಾ ದೇವಾಲಯದ ಏಳನೇ ವಾರ್ಷಿಕೋತ್ಸವ ಸಮಾರಂಭವನ್ನು ಭಾನುವಾರ ಆಯೋಜಿಸಲಾಗಿತ್ತು.
ಶ್ರೀ ಸತ್ಯ ಸಾಯಿ ಬಾಬಾ ಸಂಸ್ಥೆ ವತಿಯಿಂದ ಶ್ರೀ ಸತ್ಯ ಸಾಯಿ ಬಾಬಾ ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಸುಪ್ರಭಾತ ಸೇವೆ, ವೇದಪಾರಾಯಣ, ಕಳಸಾರಾಧನೆ, ವಿವಿಧ ಹೋಮ, ಕಳಸಾಭಿಷೇಕ, ವಿಮಾನ ಗೋಪುರಕ್ಕೆ ಕಲಶಾಭಿಷೇಕ ಸೇರಿದಂತೆ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಶ್ರೀ ಸಾಯಿ ಭಜನೆ, ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ. ಮಹಾಮಂಗಳಾರತಿ. ಅನ್ನದಾಸೋಹ. ವಿಷ್ಣು ಸಹಸ್ರನಾಮ ಪಾರಾಯಣ. ಕೋಲಾಟ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಶಾಸಕ.ಡಿ.ರವಿಶಂಕರ್ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು. ಬಳಿಕ ಶಾಸಕರನ್ನು ಸಾಯಿ ಬಾಬಾ ಸಂಸ್ಥೆ ಅಧ್ಯಕ್ಷರೂ ಆದ ತಜ್ಞ ವೈದ್ಯ ಡಾ.ಡಿ.ನಟರಾಜ್ ಸನ್ಮಾನಿಸಿದರು.
ಅಲಂಕೃತ ಬೆಳ್ಳಿ ರಥದ ಪಲ್ಲಕ್ಕಿಯಲ್ಲಿ ಶ್ರೀ ಸಾಯಿ ಬಾಬಾ ಉತ್ಸವ ಮೂರ್ತಿ ಕೂರಿಸಲಾಯಿತು. ಮೆರವಣಿಗೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಉತ್ಸವಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿದರು.
ಸಂಸ್ಥೆ ಗೌರವಾಧ್ಯಕ್ಷ ಸಿ.ಜಿ.ಸೀನೇಗೌಡ, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಮಧುಸೂದನ್, ಖಜಾಂಚಿ ಸುದೇವ್, ಸಹ ಕಾರ್ಯದರ್ಶಿ ನಾರಾಯಣ್, ನಿರ್ದೇಶಕರಾದ ಚಿಕ್ಕವೀರು, ದಯಾನಂದ್, ಬಿ.ಎಂ.ವಿಜಯಲಕ್ಷ್ಮೀ, ಆರ್.ರಮೇಶ್, ಪ್ರಭಾಕರ್, ಯೋಗೇಶ್ ಕುಮಾರ್, ಶಾರದಮ್ಮ, ಪಾರ್ವತಮ್ಮ, ನಾಗರತ್ನಮ್ಮ, ಶ್ಯಾಮಲಾ, ಕುಮುದಾ, ಸರ್ವಮಂಗಳಾ ಇತರರು ಇದ್ದರು.