ನಗರದಲ್ಲಿ ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ವೃದ್ಧೆ ಮತಪಟ್ಟಿದ್ದಾರೆ.
ವಿದ್ಯಾನಗರ ನಿವಾಸಿ ಮಹದೇವಮ್ಮ(75) ಮತ ಮಹಿಳೆ. ಗುರುವಾರ ಸಂಜೆ ನಗರದ ಯರಗನಹಳ್ಳಿಯ ಮಲೆ ಮಹದೇಶ್ವರ ರಸ್ತೆಯ ಮೊಬೈಲ್ ಮಳಿಗೆ ಬಳಿ ರಸ್ತೆ ದಾಟುತ್ತಿದ್ದಾಗ ಗಿರಿಯಾಭೋವಿ ಪಾಳ್ಯದಿಂದ ವೇಗವಾಗಿ ಬಂದ ಪ್ರೇಮ್ ಕುವಾರ್ ಅವರ ಬೈಕ್ ಮಹದೇವಮ್ಮಗೆ ಡಿಕ್ಕಿಯಾಗಿದೆ. ತಕ್ಷಣ ಕೆಳಗೆ ಬಿದ್ದ ಮಹದೇವಮ್ಮ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಗೆ ಕರೆ ತಂದಾಗ ಮತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ಧಾರ್ಥನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.