ಹನಗೋಡು ಹೋಬಳಿಯ ಹಿಂಡುಗುಡ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ದೇವರಾಜ್ ಒಡೆಯರ್, ಕಲ್ಕುಣಿಕೆ ರಾಘು,ಶಿವಕುಮಾರ್ ಇತರರಿದ್ದರು. 
ಮೈಸೂರು

ಸಮಾನತೆಗೆ ಅಂಬೇಡ್ಕರ್‌ಚಿಂತನೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯ
ಹನಗೋಡು: ಹೋಬಳಿಯ ಹಿಂಡುಗುಡ್ಲು ಗ್ರಾಮದಲ್ಲಿ ಜೈಭೀಮ್ ಪುತ್ಥಳಿ ಪ್ರತಿಷ್ಠಾನ ಸಮಿತಿ ನೇತೃತ್ವದಲ್ಲಿ ನಿರ್ಮಿಸಲಾದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರು ಸಮಾಜದ ಶೋಷಿತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತಕರು. ಅವರ ಆದರ್ಶ, ತತ್ವಗಳು ಮತ್ತು ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಸಮಾಜದಲ್ಲಿ ಶಾಂತಿ, ಸಹೋದರತೆ ಮತ್ತು ಸಮಾನತೆಗೆ ಅಂಬೇಡ್ಕರ್ ಅವರ ಚಿಂತನೆಗಳು ದಾರಿದೀಪವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೌದ್ಧ ವಿಹಾರದ ಕಲ್ಯಾಣಸಿರಿ ಬಂತೇಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಿ.ಜೆ ಪಿ ಮುಖಂಡರಾದ ನಾಗರಾಜ್ ಮಲ್ಲಾಡಿ,
ತಾ.ಜೆ ಡಿ ಎಸ್ ಮಾಜಿ ಅಧ್ಯಕ್ಷ ದೇವರಾಜ್ ಒಡೆಯರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಉದ್ಯಮಿ ಡಾ.ಎಚ್.ವಿ.ಕಾರ್ತಿಕ್, ಗ್ರಾಮದ ಶಿವಕುಮಾರ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಎಚ್.ಎಸ್.ಕುಮಾರ್,ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್, ದಲಿತ ಮುಖಂಡರಾದ ಕಿರಂಗೂರು ಸ್ವಾಮಿ, ಹೈರಿಗೆ ಗೋವಿಂದರಾಜು, ಬಸವಯ್ಯ, ರಮೇಶ್, ಬೀರಪ್ಪ, ನಾಗರಾಜ್, ರೇವಣ್ಣ, ನಾಗೇಶ್, ಮಂಜು ಇತರರಿದ್ದರು.