ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯಲ್ಲಿ ಸೋಮವಾರ ಆಯೋಜಿಸಿದ್ದ ‘ಅಂಬೇಡ್ಕರ್-ಒಳಗೊಳ್ಳುವ ಸವಾಜ’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಐಶ್ವರ್ಯಾ ವಾತನಾಡಿದರು. ಡಾ.ಎಸ್.ನರೇಂದ್ರಕುವಾರ್, ಡಾ. ಸುಮಿತ್ರಮ್ಮ, ಪ್ರೊ.ಜಿ.ಸೋಮಶೇಖರ್, ಡಾ.ಗೋಪಾಲ್ ಇದ್ದರು.
- ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಐಶ್ವರ್ಯಾ ಅಭಿಮತ
ಮೈಸೂರು: ಸಾವಾಜಿಕ ನ್ಯಾಯಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಡೆಸಿದ ಹೋರಾಟಗಳು ಈಗಲೂ ಸವಾಜಕ್ಕೆ ದಿಕ್ಕು ತೋರಿಸಿವೆ ಎಂದು ಕರಾಮುವಿ ರಾಜ್ಯಶಾಸ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಐಶ್ವರ್ಯಾ ಹೇಳಿದರು.
ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ, ಸವಾಜ ಕಲ್ಯಾಣ ಇಲಾಖೆಯ ವಿಸ್ತರಣಾ ಕೇಂದ್ರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಅಂಬೇಡ್ಕರ್-ಒಳಗೊಳ್ಳುವ ಸವಾಜ’ ಉಪನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿದರು.
ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹ, ಪಾರ್ವತಿ ಸತ್ಯಾಗ್ರಹ, ನಾಸಿಕ್ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟ ಸೇರಿದಂತೆ ಅನೇಕ ಚಳವಳಿಗಳನ್ನು ನಡೆಸಿದ್ದರು. ಅವುಗಳು ಅಸ್ಪಶ್ಯತೆ ನಿರ್ಮೂಲನೆ ಮತ್ತು ಸವಾನ ಹಕ್ಕುಗಳ ಸಾಧನೆಗೆ ಮಹತ್ವದ ಕೊಡುಗೆ ನೀಡಿವೆ ಎಂದರು.
ಪ್ರಕೃತಿ ಎಲ್ಲರನ್ನೂ ಸವಾನವಾಗಿ ಕಾಣುತ್ತದೆ. ಗಾಳಿ, ನೀರು, ಬೆಳಕು ಸೇರಿದಂತೆ ನಿಸರ್ಗದ ಸಂಪನ್ಮೂಲಗಳು ಎಲ್ಲರಿಗೂ ಸವಾನವಾಗಿ ಲಭ್ಯವಾಗುತ್ತವೆ. ಆದರೆ, ಮಾನವ ಸವಾಜದಲ್ಲಿ ವಾತ್ರ ತಾರತಮ್ಯ ಕಂಡುಬರುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಚಿಂತನೆಗಳು ಸವಾನತೆ ಆಧಾರಿತ ಸವಾಜ ನಿರ್ವಾಣಕ್ಕೆ ಭದ್ರ ಅಡಿಪಾಯ ಹಾಕಿವೆ. ಅಂಬೇಡ್ಕರ್ ಅವರ ಪ್ರಕಾರ ಜಾತಿ, ಧರ್ಮ, ಲಿಂಗ, ಭಾಷೆ ಅಥವಾ ಆರ್ಥಿಕ ಹಿನ್ನೆಲೆಂುನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನೂ ಸವಾನತೆ, ಘನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ನೆಲೆಂುಲ್ಲಿ ಕಾಣುವ ಸವಾಜವೇ ನಿಜವಾದ ಒಳಗೊಳ್ಳುವ ಸವಾಜವಾಗಿದೆ. ರಾಜಕೀಯ ಪ್ರಜಾಪ್ರಭುತ್ವ ವಾತ್ರ ಸಾಕಾಗುವುದಿಲ್ಲ. ಅದಕ್ಕೆ ಸಾವಾಜಿಕ ಪ್ರಜಾಪ್ರಭುತ್ವದ ಬೆಂಬಲ ಅಗತ್ಯವಿದೆ ಎಂದರು.
ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರಕುವಾರ್ ಮಾತನಾಡಿ, ಅಂಬೇಡ್ಕರ್ ಎಂದರೆ ಕೇವಲ ಸಂವಿಧಾನ ಶಿಲ್ಪಿ ವಾತ್ರವಲ್ಲ ಅವರು ಜ್ಞಾನದ ಸಂಕೇತ. ವಿಶ್ವಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ತಮ್ಮ ಉನ್ನತ ಶಿಕ್ಷಣ ಮತ್ತು ಜ್ಞಾನವನ್ನು ವೈಯಕ್ತಿಕ ಸುಖಕ್ಕಾಗಿ ಬಳಸಿಕೊಳ್ಳದೆ, ಶೋಷಿತ ಮತ್ತು ದಮನಿತ ಸಮುದಾಯಗಳ ಹಕ್ಕುಗಳಿಗಾಗಿ ಹಾಗೂ ಭಾರತವನ್ನು ಪ್ರಜಾಸತ್ತಾತ್ಮಕ ಮತ್ತು ವಾನವೀಂು ರಾಷ್ಟ್ರವನ್ನಾಗಿ ರೂಪಿಸುವ ಕಾರ್ಯಕ್ಕೆ ಸಮರ್ಪಿಸಿಕೊಂಡರು ಎಂದು ಹೇಳಿದರು.
ಪ್ರಾಂಶುಪಾಲೆ ಡಾ.ಸುಮಿತ್ರಮ್ಮ, ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಜಿ.ಸೋಮಶೇಖರ್, ಅತಿಥಿ ಉಪನ್ಯಾಸಕ ಡಾ.ಗೋಪಾಲ್ ಇನ್ನಿತರರು ಇದ್ದರು.