ಹುಣಸೂರು ತಾಲೂಕು ಮನುಗನಹಳ್ಳಿ ಗೇಟ್ ಬಳಿಯ ಪೌರಕಾರ್ಮಿಕರ ಕಾಲನಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕೊಳಗಟ್ಟ ಕೃಷ್ಣ, ಚಾಮುಂಡಯ್ಯ, ರಂಗಯ್ಯ, ಪೆರುಮಾಳ, ಸಿದ್ದಮ್ಮ ಇದ್ದರು. 
ಮೈಸೂರು

ಸಮಾನತೆಯ ಪ್ರತಿಪಾದಕರಾಗಿದ್ದ ಅಂಬೇಡ್ಕರ್

ಲಲಾಟಾಕ್ಷ ಎಸ್
ಹುಣಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆಯ ಪ್ರತಿಪಾದಕರಾಗಿದ್ದರು ಎಂದು ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಮನುಗನಹಳ್ಳಿ ಗೇಟ್ ಬಳಿಯ ಪೌರಕಾರ್ಮಿಕರ ಕಾಲನಿಯಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರಕಾರ್ಮಿಕ ಕುಟುಂಬಗಳು ಅಂಬೇಡ್ಕರ್ ಜಯಂತಿ ಆಚರಣೆ ಮಾಡಿ, ಅಂಬೇಡ್ಕರ್ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸಿದ್ದಾರೆ. ಒಂದು ರೀತಿಯಲ್ಲಿ ಇದು ಪ್ರತಿರೋಧದ ಆಚರಣೆ ಎಂದೇ ಭಾವಿಸಬೇಕಿದೆ. ನಾಗರಿಕ ಸಮಾಜದ ಶುಚಿತ್ವವನ್ನೇ ಬದುಕಾಗಿಸಿಕೊಂಡು, ದಶಕಗಳಿಂದ ನೆಲೆನಿಂತಿರುವ ಪೌರಕಾರ್ಮಿಕರಿಗೆ ಕನಿಷ್ಠ ವಸತಿ, ನಿವೇಶನ, ಮೂಲಸೌಕರ್ಯ ಕಲ್ಪಿಸದ ಸರ್ಕಾರ ಅಂಬೇಡ್ಕರ್ ಜಯಂತಿ ಆಚರಿಸುವ ನೈತಿಕತೆ ಕಳೆದುಕೊಂಡಿದೆ ಎಂದು ಬೇಸರಿಸಿದರು.
ಮನುಗನಹಳ್ಳೀ ಗೇಟ್ ಪೌರಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರೂ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ. ಅಂಬೇಡ್ಕರ್ ಥೀಮ್ ಪಾರ್ಕ್, ಚಿತ್ರನಗರಿ ನಿರ್ಮಾಣ ಮಾಡುವ ಬಗ್ಗೆ ಮಾತನಾಡುವ ಸಚಿವರು ಬಡವರ ಕುರಿತು ಮಾತನಾಡದಿರುವುದು ವಿಷಾದದ ಸಂಗತಿ. ಹಾಗಾಗಿ ಈ ಪ್ರತಿರೋಧದ ಆಚರಣೆ ಮೂಲಕ ನಾವು ಸರ್ಕಾರವನ್ನು ಎಚ್ಚರಿಸುತ್ತಾ ಮೂಲಸೌಕರ್ಯ ಕಲ್ಪಿಸಿಕೊಡುವುದರ ಮೂಲಕ ಸರ್ಕಾರ ತನ್ನ ನೈತಿಕತೆ ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.
ಚಾಮುಂಡಯ್ಯ, ಪೆರುಮಾಳ್, ರಂಗಯ್ಯ, ಸಿದ್ದಮ್ಮ, ಚಾಮಮ್ಮ ಇತರರು ಹಾಜರಿದ್ದರು.