ಅಲೆಯನ್ಸ್ ಎಂಟು ಕ್ಲಬ್‌ಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಾಗರಾಜ ವಿ. ಬೈರಿ, ಅಂಶಿ ಪ್ರಸನ್ನಕುಮಾರ್, ಮಹಾಬಲೇಶ್ವರಿ ಬೈರಿ, ಎಸ್. ವೆಂಕಟೇಶ್, ಸಿರಿ ಬಾಲು, ಆಕಾಶ್ ಬೈರಿ, ಡಾ.ಕೆ.ಬಿ. ಲಿಂಗರಾಜು, ಸಿ.ಬಿ.ಶ್ರೀಶೈಲ, ಕೃಷ್ಣೋಜಿರಾವ್ ಇತರರಿದ್ದರು. 
ಮೈಸೂರು

ಎಲ್ಲೆಡೆ ತ್ವರಿತಗತಿಯಲ್ಲಿ ಬೆಳೆಯುತ್ತಿದೆ ಅಲೆಯನ್ಸ್ ಸಂಸ್ಥೆ: ನಾಗರಾಜ ವಿ.ಬೈರಿ

ಪ್ರಮುಖ ಮುಖ್ಯಾಂಶಗಳು

  • ಆಲೆಯನ್ಸ್ ಕ್ಲಬ್ ಸಂಸ್ಥಾಪಕರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇತೃತ್ವ ವಹಿಸುವವರು ಭಾರತೀಯರೇ ಆಗಿದ್ದಾರೆ
  • ಸಂಸ್ಥೆ ಸ್ಥಾಪನೆಯಾದ ಅತಿ ಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ
ಮೈಸೂರು:ಸೇವಾ ಮನೋಭಾವನೆಯಿಂದ ಆರಂಭಗೊಂಡಿರುವ ಅಲೆಯನ್ಸ್ ಸಂಸ್ಥೆ ಭಾರತೀಯರೇ ಸ್ಥಾಪಿಸಿದ್ದು, ಸಂಸ್ಥೆ ಎಲ್ಲೆಡೆ ತ್ವರಿತಗತಿಯಲ್ಲಿ ಬೆಳೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ವಿ.ಬೈರಿ ಹೇಳಿದರು.
ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ-255-ಎಸ್‌ಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯನಗರ, ನೇತಾಜಿ, ವಲ್ಲಭಬಾಯ್, ಕೃಷ್ಣದೇವರಾಯ, ತಿಲಕ್, ಸಿರಿ ಸಂಭ್ರಮ, ಸಿರಿ ಫೀನಿಕ್ಸ್, ಸಿರಿ ಸಪ್ತಸ್ವರ ಕ್ಲಬ್‌ಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತರ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ನೇತೃತ್ವ ವಹಿಸಿಕೊಂಡಿರುವರು ವಿದೇಶಿಯರು. ಆದರೆ ಆಲೆಯನ್ಸ್ ಕ್ಲಬ್ ಸಂಸ್ಥಾಪಕರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇತೃತ್ವ ವಹಿಸುವವರು ಭಾರತೀಯರೇ ಆಗಿದ್ದಾರೆ. ಈ ಸಂಸ್ಥೆ ಸ್ಥಾಪನೆಯಾದ ಅತಿ ಕಡಿಮೆ ಅವಧಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕಳೆದೆರಡು ವರ್ಷಗಳಲ್ಲಿ ತಲಾ 40ಕ್ಕೂ ಹೆಚ್ಚು ಕ್ಲಬ್‌ಗಳು ಸ್ಥಾಪನೆಯಾಗಿವೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಬೆಳೆಯುತ್ತಿವೆ. ಇತರ ಕ್ಲಬ್‌ಗಳಿಗೆ ಹೋಲಿಸಿದಲ್ಲಿ ಕಡಿಮೆ ಶುಲ್ಕ ಇರುವುದು ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚು ಹಾಗೂ ಮುಕ್ತ ಅವಕಾಶ ಇರುವ ಕಾರಣಕ್ಕೆ ಹೆಚ್ಚು ಜನರು ಬಂದು ಸೇರುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಜಿಲ್ಲಾ ಪ್ರಾಂತಪಾಲ ಮಹಾಬಲೇಶ್ವರ ಬೈರಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಆಕಾಶ್ ಬೈರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಪ್ರಾಂತಪಾಲರಾದ ಎಸ್.ವೆಂಕಟೇಶ್, ಸಿರಿ ಬಾಲು, ಎರಡನೇ ಉಪ ಪ್ರಾಂತಪಾಲ ನ.ಗಂಗಾಧರಪ್ಪ, ಜಿಲ್ಲಾ ಸಂಪುಟ ಕಾರ್ಯದರ್ಶಿ ಸಿ.ಬಿ.ಶ್ರೀಶೈಲ, ಖಜಾಂಚಿ ಇಂದಿರಾ ವೆಂಕಟೇಶ್, ಮೂರನೇ ಉಪ ಪ್ರಾಂತಪಾಲೆ ಶಾಲಿನಿ ನಾಗರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣೋಜಿರಾವ್, ರಾಯಭಾರಿ ಶೋಭಾ ಸಿರಿಬಾಲು, ಪ್ರಾದೇಶಿಕ ಅಧ್ಯಕ್ಷರಾದ ಡಿ.ಮಹದೇವ್, ಡಾ.ಕೆ.ಬಿ. ಲಿಂಗರಾಜು, ವಲಯ ಅಧ್ಯಕ್ಷರಾದ ಶ್ರೀನಿವಾಸ್, ವೆಂಕಟೇಶ್, ಕೆ.ಕೆ.ಜಯರಾಂ, ಪದಾಧಿಕಾರಿಗಳಾದ ಮಂಜುನಾಥ್, ಕವಿತಾ ಶಿರೂರ್, ಪನ್ನಗ ವಿಜಯಕುಮಾರ್, ಶ್ರೀಧರಮೂರ್ತಿ, ಲಕ್ಷ್ಮಣ್, ರಾಜು, ನೇತ್ರ ರಾವ್, ಶಾಂತಿ, ಪದ್ಮನಾಭ, ಟಿ.ರಮೇಶ್, ಆನಂದ್, ಜಯಕುಮಾರ್, ಶ್ರುತಿ ಪ್ರಸನ್ನ, ರೇಖಾ, ಮಾದಪ್ಪ, ರಾಕೇಶ್ ಅರಸ್, ಆರ್.ಮನು, ಕೃಪಾ, ಸರಸ್ವತಿ, ಕಾವೇರಿ ಪ್ರಕಾಶ್, ಅಂಥೋಣಿ ಪೌಲ್ ರಾಜ್ ಇತರರಿದ್ದರು.