ಅಲಯನ್ಸ್ ಕ್ಲಬ್ ಆಫ್ ಮೈಸೂರು ರಾಜೀವ್ ನಗರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಾ. ನಾಗರಾಜ್ ಬೈರಿ, ಖಿಜರ್ ಮಹಮ್ಮದ್, ಮಹಾಬಲೇಶ್ವರ ಬೈರಿ, ರಾಜು, ಡಾ.ಎಸ್.ವೆಂಕಟೇಶ್ ಇತರರಿದ್ದರು.
ಅಲಯನ್ಸ್ ಕ್ಲಬ್ ಆಫ್ ಮೈಸೂರು ರಾಜೀವ್ ನಗರದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೂಟಗಳ್ಳಿಯ ಶ್ರೀ ಅನಂತೇಶ್ವರ ಭವನದಲ್ಲಿ ನೆರವೇರಿತು.
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನಾಷನಲ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾರ್ಯದರ್ಶಿ ಡಾ. ನಾಗರಾಜ್ ವಿ.ಬೈರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಸೇವೆಯ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಸಲಹೆ ನೀಡಿದರು.
ಖಿಜರ್ ಮಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಾಂತಪಾಲ ಮಹಾಬಲೇಶ್ವರ ಬೈರಿ, ಐಸಿಸಿ ಚೇರ್ಮನ್ ಬಾಲಕೃಷ್ಣ ರಾಜು, ಡಾ.ಎಸ್.ವೆಂಕಟೇಶ್, ಪ್ರಥಮ ಉಪ ಜಿಲ್ಲಾ ಪ್ರಾಂತಪಾಲ ಸಂತೋಷ್ ಕುಮಾರ್, ದ್ವಿತೀಯ ಉಪ ಜಿಲ್ಲಾ ಪ್ರಾಂತಪಾಲ ಎನ್. ಗಂಗಾಧರಪ್ಪ, ಶಾಲಿನಿ, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಇಂದಿರಾ ವೆಂಕಟೇಶ್, ಕೃಷ್ಣೋಜಿ ರಾವ್ ಇತರರಿದ್ದರು.
ಅಲಯನ್ಸ್ ಕ್ಲಬ್ ಆಫ್ ಮೈಸೂರು ರಾಜೀವ್ ನಗರದ ನೂತನ ಅಧ್ಯಕ್ಷೆಯಾಗಿ ಉಮ್ರಾನಾ ಇಸ್ಮಾಯಿಲ್, ಕಾರ್ಯದರ್ಶಿಯಾಗಿ ಜೆಬಾ ಉನ್ನಿಸಾ ಹಾಗೂ ಖಜಾಂಚಿಯಾಗಿ ಸಯೀಮಾ ಸಾಧಿಯಾ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು.