ಅಮ್ಮನವರ ಚಿತ್ರ 
ಮೈಸೂರು

ಆಷಾಢ ಶುಕ್ರವಾರಕ್ಕೆ ಸಕಲ ತಯಾರಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಪೂಜೋತ್ಸವ
ನಂಜನಗೂಡು: ಇಲ್ಲಿನ ಚಾಮುಂಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರ ವಿಶೇಷ ಪೂಜೆಗೆ ಸಕಲ ಸಿದ್ಧತೆಗಳಾಗಿವೆ.
ಮುಂಜಾನೆ 4 ಗಂಟೆಗೆ ಅಮ್ಮನವರಿಗೆ ಹಾಲು, ಮೊಸರು, ತುಪ್ಪ, ಪಂಚಾಮೃತ, ಅರಿಶಿನ, ಕುಂಕುಮ, ವಿಭೂತಿ, ಗಂಧಗಳಿಂದ ಮಹಾರುದ್ರಾಭಿಷೇಕ ಮಂತ್ರದಲ್ಲಿ ಅಮ್ಮನವರಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ, 7 ಗಂಟೆಗೆ ಮಹಾಮಂಗಳಾರತಿ ನಂತರ ಭಕ್ತರಿಗೆ ಅಮ್ಮನವರ ದರ್ಶನಕ್ಕೆ ಅನುವು ಮಾಡಿ ಕೊಡಲಾಗುವುದು. ಬಳಿಕ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅಮ್ಮನವರ ದೇವಾಲಯದ ಅರ್ಚಕ ವೈದ್ಯನಾಥ ತಿಳಿಸಿದರು.
ಚಾಮುಂಡೇಶ್ವರಿ ಅಮ್ಮನವರಿಗೆ ಅತ್ಯಂತ ಪ್ರಿಯವಾದ ಮಾಸಗಳಲ್ಲಿ ಅಷಾಢ ಮಾಸ ಬಹಳ ಶ್ರೇಷ್ಠ. ಈ ಹಿನ್ನೆಲೆಯಲ್ಲಿ ನಂಜನಗೂಡಿನ ಮೈಸೂರು - ಚಾಮರಾಜನಗರ ಮುಖ್ಯರಸ್ತೆಯಲ್ಲಿ ಇರುವ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಅಷಾಢ ಮಾಸದ ಪ್ರಥಮ ಶುಕ್ರವಾರಕ್ಕೆ ಸಿದ್ಧತೆಗಳಾಗಿವೆ.
ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜೆ.ಕೃಷ್ಣ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನ ನಾನಾ ಭಾಗಗಳಿಂದ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ವತಿಯಿಂದ ಕುಡಿಯುವ ನೀರು ಮತ್ತು ಸುಲಲಿತವಾಗಿ ಅಮ್ಮನವರ ದರ್ಶನ ಪಡೆಯಲು ಬ್ಯಾರಿ ಗೇಟ್, ಮಳೆ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ, ಕೃತಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ ಎಂದರು.