ಜೆಎನ್‌ಟಿಯು ಹಾಗೂ ಸಿಎಫ್‌ಟಿಆರ್‌ಐ ಪರಸ್ಪರ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು. ಪ್ರೊ.ಸಿ.ಎಸ್.ಆರ್.ಕೆ.ಪ್ರಸಾದ್, ಪ್ರೊ.ಕೆ.ಪದ್ಮರಾಜು, ಡಾ.ಗಿರಿಧರ್, ಡಾ.ಪಿ.ರಾಮಕೃಷ್ಣ ಇದ್ದರು.
- ಸಿಎಫ್‌ಟಿಆರ್‌ಐ, ಜೆಎನ್‌ಟಿಯು ಸಹಿ
- ಆಹಾರ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ
ಆಹಾರ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ಕೌಶಲಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನ ಸಿಎಸ್‌ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಹಾಗೂ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ-ಕಾಕಿನಾಡ (ಜೆಎನ್‌ಟಿಯು) ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ.
ಜೆಎನ್‌ಟಿಯುಕೆಯ 80ನೇ ವರ್ಷದ ಸಂಸ್ಥಾಪನಾ ಸಮಾರೋಪ ಸಮಾರಂಭದಲ್ಲಿ ಒಪ್ಪಂದ ವಿನಿಮಯ ನಡೆಯಿತು. ಸದರಿ ಒಪ್ಪಂದ ಅಡಿ ಜೆಎನ್‌ಟಿಯು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನ, ಸಂಶೋಧನಾ ವಿಧಾನಗಳು ಹಾಗೂ ಕೈಗಾರಿಕಾ ಅನುಭವಗಳ ಕುರಿತು ತರಬೇತಿ ದೊರೆಯಲಿದ್ದು, ಆಹಾರ ಕ್ಷೇತ್ರದಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳಿಗೆ ಉತ್ತೇಜನ ಸಿಗಲಿದೆ. ಕಾರ್ಯಾಗಾರಗಳು, ತಂತ್ರಜ್ಞಾನ ಪ್ರದರ್ಶನಗಳು ಹಾಗೂ ಆಹಾರ ಭದ್ರತೆಗೆ ಸಂಬಂಧಿಸಿದ ಜಂಟಿ ಸಂಶೋಧನಾ ಯೋಜನೆಗಳನ್ನು ಎರಡೂ ಸಂಸ್ಥೆಗಳು ಕೈಗೊಳ್ಳಲಿವೆ.
ಒಪ್ಪಂದ ವಿನಿಮಯ ಕಾರ್ಯಕ್ರಮದಲ್ಲಿ ಜೆಎನ್‌ಟಿಯು ಕುಲಪತಿ ಪ್ರೊ.ಸಿ.ಎಸ್.ಆರ್.ಕೆ.ಪ್ರಸಾದ್, ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪದ್ಮರಾಜು, ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಗಿರಿಧರ್, ಸಿಎಫ್‌ಟಿಆರ್‌ಐ ಮಾಜಿ ವಿಜ್ಞಾನಿ ಹಾಗೂ ಜೆಎನ್‌ಟಿಯು ಆಹಾರ ತಂತ್ರಜ್ಞಾನ ಕಾರ್ಯಕ್ರಮದ ಸಂಯೋಜಕ ಡಾ.ಪಿ.ರಾಮಕೃಷ್ಣ ಇದ್ದರು.