ಬೈಕಿನಿಂದ ಬಿದ್ದು ಅಗ್ನಿವೀರ್ ಯೋಧ ಮೃತಪಟ್ಟಿದ್ದಾರೆ.
ಹುಣಸೂರು: ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಅಗ್ನಿವೀರ್ ಯೋಧ ಮೃತಪಟ್ಟಿದ್ದಾರೆ.
ತಾಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ನಿವಾಸಿ ನಂಜೇಗೌಡ ಅವರ ಪುತ್ರ ಅಗ್ನಿವೀರ್ ಸೈನಿಕ ನಂದನ್ (24) ಮೃತ. ಅಗ್ನಿವೀರ್ ಯೋಜನೆಯಲ್ಲಿ ಸೇನೆಗೆ ಸೇರಿದ್ದ ನವೀನ್, ಕಳೆದ 3 ವರ್ಷದಿಂದ ಭಾರತೀಯ ಸೇನೆಯ ಲಡಾಕ್, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದು, 15 ದಿನಗಳ ಹಿಂದೆ ರಜೆ ಮೇಲೆ ಸ್ವ ಗ್ರಾಮಕ್ಕೆ ಆಗಮಿಸಿದ್ದರು.
ಚಾಮುಂಡೇಶ್ವರಿ ದರ್ಶನಕ್ಕಾಗಿ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಬಿದ್ದು ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸೋಮವಾರ ಸ್ವಗ್ರಾಮ ಹಿರೀಕ್ಯಾತನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.