ಬೆಟ್ಟದಪುರ ಸಮೀಪದ ವಡ್ಡರಬೈಲಕುಪ್ಪೆಯಲ್ಲಿ ಕೆರೆ ಕಾಲುವೆ, ಸೇವಾ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿ ಪೂಜೆ ನೆರವೇರಿಸಿದರು. ನಿತಿನ್ ವೆಂಕಟೇಶ್, ಪುಟ್ಟರಾಜು, ಸ್ವಾಮಿ, ರಹಮತ್ ಜಾನ್ ಬಾಬು, ಜಯಶ್ರೀ, ರಾಜೇಶ್ ಇದ್ದರು. 
ಮೈಸೂರು

ಜನರ ಸಮಸ್ಯೆಗಳನ್ನು ನಿವಾರಿಸಲು ಕ್ರಮ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • cm siddaramaiah
  • Minister K. Venkatesh
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಜನರ ಸಮಸ್ಯೆಗಳನ್ನು ನೀಗಿಸಲು ಎಲ್ಲ ರೀತಿಯ ಕ್ರಮತೆಗೆದುಕೊಳ್ಳುವ ಮೂಲಕ, ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಬೆಟ್ಟದಪುರ ಸಮೀಪದ ವಡ್ಡರಬೈಲಕುಪ್ಪೆ ಗ್ರಾಮದಲ್ಲಿ ಸೋಮವಾರ ಕೆರೆ ಕಾಲುವೆ, ಸೇವಾ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕೆರೆ, ಕಾಲುವೆ, ಏರಿಗಳ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳಿಗೆ ಇಂದು ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ವಿಶೇಷ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ವೇದಿಕೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಬಗೆಹರಿಸುವಂತೆ ಸೂಚಿಸಿದರು.
ವಿವಿಧೆಡೆ ಭೂಮಿ ಪೂಜೆ: 25 ಲಕ್ಷ ರೂ. ವೆಚ್ಚದಲ್ಲಿ ಬೆಟ್ಟದಪುರದಲ್ಲಿ ತಾವರೆಕೆರೆ ತೂಬು, ಕೆರೆಯ ರಸ್ತೆ ಬೀದಿಯಲ್ಲಿ ತಡೆಗೋಡೆ ಮತ್ತು ಕಾಲುವೆ ನಿರ್ಮಾಣ, ವಡ್ಡರಬೈಲಕುಪ್ಪೆಯಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಕೆರೆಗೆ ತೂಬು, ಕಾಲುವೆ ಮತ್ತು ಸೇವಾ ರಸ್ತೆ ನಿರ್ಮಾಣ, ಹಲಗನಹಳ್ಳಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸೂಳೆಕೆರೆ ಹಳ್ಳಕ್ಕೆ ರಕ್ಷಣಾತ್ಮಕ ಕಾಮಗಾರಿ ಮತ್ತು ನಾಲೆಯ ಸೇವಾ ರಸ್ತೆಯ ಅಭಿವೃದ್ಧಿ, ರಾಜನಬಿಳಗೂಲಿಯಲ್ಲಿ 85 ಲಕ್ಷ ರೂ.ವೆಚ್ಚದಲ್ಲಿ ಕಣಗಾಲು ಮುಖ್ಯರಸ್ತೆಯಿಂದ ಗರಿಗುಡ್ಡ ಕಾವಲಿಗೆ ಸಂಪರ್ಕ ಕಲ್ಪಿಸುವ ಮೆಟಲಿಂಗ್ ರಸ್ತೆ ಮತ್ತು ಗರಿಗುಡ್ಡಕಾವಲ್ ಬ್ರಾಂಚ್ ನಾಲೆಯ ಸೇವಾ ರಸ್ತೆ ನಿರ್ಮಾಣ, ಗಂಗನಕುಪ್ಪೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗಂಗನಕುಪ್ಪೆ ಕೆಂಪುಕೆರೆ ರಸ್ತೆ ಬದಿಯಲ್ಲಿ ತಡೆಗೋಡೆ, ಸೇವಾ ರಸ್ತೆ ಮತ್ತು ಕೆರೆ ಕಾಲುವೆ ನಿರ್ಮಾಣ, ಅಡಗೂರಿನಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣ ಕಾಮಗಾರಿ, ಅಂಬಲಾರೆಯಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಮೊಗೆಕೆರೆಗೆ ಸೋಪಾನ ಕಟ್ಟೆ, ಕ್ಯಾಟಲ್ ಯಾರ್ಂಪ್, ಕೆರೆ ಕಾಲುವೆ ಮತ್ತು ಸೇವಾ ರಸ್ತೆ ನಿರ್ಮಾಣ, ಚನ್ನಕೇಶವಪುರದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಪಿರಿಯಾಪಟ್ಟಣ ಏತ ನೀರಾವರಿ ಯೋಜನೆಯಡಿ ಕರಡಿಲಕ್ಕನಕೆರೆ ಅಭಿವೃದ್ಧಿ ಮತ್ತು ಬಸವನಕಟ್ಟೆ ಹಳ್ಳಕ್ಕೆ ಅಡ್ಡ ಮೋರಿ ನಿರ್ಮಾಣ, 1 ಕೋಟಿ ರೂ. ವೆಚ್ಚದಲ್ಲಿ ವಿತರಣಾ ನಾಲೆ 2 ರಲ್ಲಿ ಬಾಕ್ಸ್ ಡ್ರೈನ್ ಮತ್ತು ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿ ನಿರ್ಮಾಣ, ಬಿಳಗುಂದದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಹಾರನಹಳ್ಳಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ದೊಡ್ಡಕೆರೆಗೆ ಕೆರೆ ತೂಬು, ಕಾಲುವೆ, ಏರಿ ಎತ್ತರಿಸುವುದು ಮತ್ತು ಸೇವಾ ರಸ್ತೆ ನಿರ್ಮಾಣ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯ ವಿತರಣಾ ನಾಲೆ 5 ರಿಂದ ಸತ್ತೆಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಹಾರನಹಳ್ಳಿ ಗ್ರಾಮ ವ್ಯಾಪ್ತಿಯ ಜೋಗಿಕಟ್ಟೆ, ಮುಳ್ಳುಕೆರೆ, ಸಣ್ಣಗೌಡನಕಟ್ಟೆ ಹಳ್ಳಕ್ಕೆ ಅಡ್ಡ ಮೋರಿ ಕಾಮಗಾರಿ, ಜೋಗಿಕೆರೆಗೆ ಕ್ಯಾಟಲ್ ಯಾರ್ಂಪ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ನೆರವೇರಿಸಿ ಚಾಲನೆ ನೀಡಿದರು.
ತಾಲೂಕು ಆಶ್ರಯ ಹಾಗೂ ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಗ್ರಾಪಂ ಅಧ್ಯಕ್ಷೆ ಜಯಶ್ರೀ ಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಸಿ.ಎನ್. ರಾಜೇಶ್, ಮುಖಂಡರಾದ ಸಿ.ಕೆ. ಪ್ರಕಾಶ್, ಪುಟ್ಟರಾಜು, ರಂಗಭೋವಿ, ರಾಮಸ್ವಾಮಿ, ರಾಜಾಭೋವಿ, ಶಿವಣ್ಣ, ಹರೀಶ್, ಮಲ್ಲೇಶ್, ಸುಮಿತ್, ರವಿರಾಜ್ ಭೋವಿ, ಪುನೀತ್ ಕುಮಾರ್, ಸಂತೋಷ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಒ ಸುನೀಲ್ ಕುಮಾರ್, ಹಾರಂಗಿ ಇಲಾಖೆಯ ಎಇಇ ಗೋಕುಲ್, ಮೋಹನ್, ಇಂಜಿನಿಯರ್ ಶಿವುಕುಮಾರ್, ಪಿಡಿಒ ಶ್ರೀದೇವಿ, ಉಪತಹಸೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಆನಂದ್, ವೈದ್ಯಾಧಿಕಾರಿ ಡಾ.ಸಂದೀಪ್ ಇದ್ದರು.