ಗೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಮೋಹನ್ ಕುಮಾರ್ ಉದ್ಘಾಟಿಸಿದರು. ದೊಡ್ಡ ಸ್ವಾಮಿ, ಪುಟ್ಟಬುದ್ಧಿ, ಮಹದೇವಸ್ವಾಮಿ, ಮಹೇಶ್, ಡಾ. ರಾಘವೇಂದ್ರ, ಡಾ.ಚೇತನ್ ಇದ್ದರು. 
ಮೈಸೂರು

ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನಕ್ಕೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್
  • ಗೋನಹಳ್ಳಿ ಗ್ರಾಮ
ನಂಜನಗೂಡು: ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಹಾಲು ಕರೆಯುವ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್ ತಿಳಿಸಿದರು.
ಪಶು ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಶ್ರೀನಿವಾಸನ್ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಗೋನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಹಾಲು ಕರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಾಯದ ಜತೆಗೆ ಹೈನುಗಾರಿಕೆಯನ್ನು ರೈತರು ಉಪಕಸುಬನ್ನಾಗಿ ಅವಲಂಬಿಸಿದ್ದಾರೆ. ಕರುಗಳು ಹುಟ್ಟಿದ ಸಂದರ್ಭದಲ್ಲಿ ಕಾಲಕ್ಕೆ ತಕ್ಕಂತೆ ಔಷಧ, ಪಶು ಆಹಾರ ಪೂರೈಕೆ, ಜಂತುಹುಳು ಔಷಧ ಕೊಡಬೇಕು. ಆ ಮೂಲಕ ಗುಣಮಟ್ಟದ ಹಾಲು ಪಡೆಯುವಂತಾಗಬೇಕು ಎಂದರು.
ಜೆರ್ಸಿ, ನಾಟಿ ತಳಿಯ ಉತ್ತಮ ಕರುಗಳು ಹಾಗೂ ಹಾಲು ಕರೆಯುವ ಸ್ಪರ್ಧೆಯಲ್ಲಿ ಹೆಚ್ಚು ಹಾಲು ಕರೆದ ಐದು ರೈತರಿಗೆ ಹಾಲಿನ ಕ್ಯಾನ್ ಹಾಗೂ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ಡೇರಿ ಅಧ್ಯಕ್ಷ ದೊಡ್ಡಸ್ವಾಮಿ, ಪುಟ್ಟಬುದ್ಧಿ, ಮಹದೇವಸ್ವಾಮಿ, ಟ್ರಸ್ಟಿ ಮಹದೇವಸ್ವಾಮಿ, ಕಾರ್ಯದರ್ಶಿ ಮಹೇಶ್, ಡಾ. ರಾಘವೇಂದ್ರ, ಡಾ.ಚೇತನ್, ಅಕ್ಷತಾ ಡಾ.ವಿಜೇತ, ಮುದ್ದೇಶ್ ಇತರರು ಹಾಜರಿದ್ದರು.