ನಗರದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿ ಬಾಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ಎಂ.ಎ.ರಂಗನಾಥನ್, ಸಿ.ಕಲ್ಪನಾ, ಲಲಿತಮ್ಮ, ರವಿ, ಶೋಭಾ, ಪೂರ್ಣಿಮಾ, ಸತೀಶ್ ದಳವಾಯಿ, ಡಾ. ದೀಪು ಇತರರಿದ್ದರು. 
ಮೈಸೂರು

ಹಿಂದೆ ಗುರು ಇದ್ದರೆ ಗುರಿ ಸಾಧನೆ ಸಾಧ್ಯ

ಶಾಸಕ ದರ್ಶನ್ ಧ್ರುವನಾರಾಯಣ ಅಭಿಮತ

ನಂಜನಗೂಡು: ಗುರುವೊಬ್ಬ ಬೆನ್ನ ಹಿಂದೆ ನಿಂತರೆ ಜೀವನದಲ್ಲಿ ಯಾವುದೇ ಗುರಿಯನ್ನಾದರೂ ಸಾಧಿಸಬಹುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ, ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸರ್ವಪಲ್ಲಿ ರಾಧಾಕೃಷ್ಣನ್, ಜ್ಯೋತಿ ಬಾಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಾವು ಜೀವನದಲ್ಲಿ ಯಾವುದೇ ಗುರಿಯನ್ನು ಮುಟ್ಟಬೇಕಾದರೆ ಮಾರ್ಗದರ್ಶನ, ಧೈರ್ಯ, ಪ್ರೋತ್ಸಾಹ, ನೀಡಲು ಹಿಂದೆ ಒಬ್ಬ ಗುರು ನಿಂತಿರಬೇಕು. ಹಾಗಾದರೆ ಮಾತ್ರ ಸಾವಿರ ಅಡೆತಡೆಗಳಿದ್ದರೂ ಗುರಿಯನ್ನು ಮುಟ್ಟಬಹುದು. ಶಿಕ್ಷಕರು ಮನೆಯಲ್ಲಿ ತಮ್ಮ ಕುಟುಂಬಸ್ಥರ ಜತೆ ಕಳೆಯುವ ಸಮಯಕ್ಕಿಂತ ಹೆಚ್ಚಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ ಸಮಯ ಕಳೆಯುತ್ತಾರೆ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದ ಹೊರತಾಗಿ ಜೀವನದ ಪಾಠವನ್ನು ಕಲಿಸುತ್ತಾರೆ. ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಹಾವ-ಭಾವ, ನಡೆ-ನುಡಿಯನ್ನು ತೀಕ್ಷ್ಣವಾಗಿ ಗಮನಿಸಿ, ಶಿಲ್ಪಿ ಕಲ್ಲನ್ನು ಶಿಲೆಯನ್ನಾಗಿಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರಿಸುತ್ತಾರೆ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನ ಪರಿಶ್ರಮದ ಹಿಂದೆ ಗುರುವಿನ ಪಾತ್ರ ಇರುತ್ತದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎ.ರಂಗನಾಥನ್, ಪ್ರಧಾನ ಕಾರ್ಯದರ್ಶಿ ಸಿ.ಕಲ್ಪನಾ, ಉಪಾಧ್ಯಕ್ಷೆ ಲಲಿತಮ್ಮ, ಖಜಾಂಚಿ ರವಿ, ಸಂಘಟನಾ ಕಾರ್ಯದರ್ಶಿ ಶೋಭಾ, ಸಹ ಕಾರ್ಯದರ್ಶಿ ಪೂರ್ಣಿಮಾ, ಉಪಾಧ್ಯಾಯರ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ದಳವಾಯಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಡಾ. ದೀಪು. ಕಾರ್ಯದರ್ಶಿ ಮಹೇಶ್. ರಾಜ್ಯ ಪರಿಷತ್ ಸದಸ್ಯ ಹನುಮಂತರಾಜು, ದೈಹಿಕ ಶಿಕ್ಷಣಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರವಿಕುಮಾರ್, ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಧರ್ಮ ರತ್ನಾಕರ, ಉಪಾಧ್ಯಾಯರ ಸಹಕಾರ ಸಂಘದ ನಿರ್ದೇಶಕರಾದ ಸಿದ್ದೇಶ್, ಲೀಲಾ, ಮಂಜುಳಾ, ಇಂದ್ರೇಶ್, ನರಸಿಂಹಮೂರ್ತಿ, ಮಹಾದೇವ ಮೂರ್ತಿ, ಸುರೇಂದ್ರ, ನೀಲಿ ಸಿದ್ದು ಸೇರಿದಂತೆ ಶಿಕ್ಷಕ ಮತ್ತು ಅಧಿಕಾರಿ ವರ್ಗದವರು ಇದ್ದರು.