ಜ್ಞಾನಬುತ್ತಿ ಸಂಸ್ಥೆಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಡಾ.ಎಸ್.ಎಲ್.ಚನ್ನಬಸವಣ್ಣ ಮಾತನಾಡಿದರು. ಕವಿತಾ ರಾಜಾರಾಂ, ಪ್ರೊ.ಎಂ.ಕೃಷ್ಣೇಗೌಡ, ಕೃ.ಪ.ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ ಇತರರು ಇದ್ದರು. 
ಮೈಸೂರು

ಸಾಧನೆಗಳು ಪ್ರಥಮ ಹೆಜ್ಜೆಯಿಂದಲೇ ಆರಂಭ: ಕೆಪಿಎ ನಿರ್ದೇಶಕ ಡಾ.ಎಸ್.ಎಲ್.ಚನ್ನಬಸವಣ್ಣ

ಮೈಸೂರು: ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು. ಅದನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲೆ ಇದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಡಾ.ಎಸ್.ಎಲ್.ಚನ್ನಬಸವಣ್ಣ ತಿಳಿಸಿದರು.
ಜ್ಞಾನಬುತ್ತಿ ಸಂಸ್ಥೆಯಿಂದ ಲಕ್ಷ್ಮಿಪುರಂ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಎರಡನೇ ದಿನ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. 
ನಾವು ಮಾಡುವ ಕೆಲಸದ ಮೇಲೆ ನಂಬಿಕೆ ಮತ್ತು ಭರವಸೆಗಳನ್ನು ಇಡಬೇಕು. ಸಾಧನೆಗಳು ಪ್ರಥಮ ಹೆಜ್ಜೆಯಿಂದಲೇ ಆರಂಭವಾಗುತ್ತದೆ. ನಿರಂತರ ಪ್ರಯಾಣದ ನಂತರ ನಮ್ಮ ಕನಸುನನಸಾಗುತ್ತದೆ. ಉದ್ಯೋಗದಲ್ಲಿ ಹಲವಾರು ಕ್ಷೇತ್ರಗಳಿವೆ. ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತಹ ಹುದ್ದೆಗಳನ್ನು ಆಯ್ದುಕೊಂಡರೆ ಮಾತ್ರ ನಿಮ್ಮ ವೃತ್ತಿ ಜೀವನದಲ್ಲಿ ಹೆಸರು, ಯಶಸ್ಸು, ಕೀರ್ತಿ ಮತ್ತು ಸಂತೃಪ್ತಿ ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.
ಹೆಚ್ಚವರಿ ಪ್ರಾದೇಶಿಕ ಆಯುಕ್ತೆ ಕವಿತಾ ರಾಜಾರಾಂ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಶಿಬಿರಾರ್ಥಿಗಳನ್ನು ಉದ್ದೇಶಿ ಮಾತನಾಡಿದರು. ಜ್ಞಾನಬುತ್ತಿ ಸಂಸ್ಥೆಯ ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ, ಪ್ರೊ.ಕೃ.ಪ.ಗಣೇಶ,  ಡಾ.ಎಸ್.ಬಿ.ಎಂ.ಪ್ರಸನ್ನ, ಕೆ.ವೈ.ನಾಗೇಂದ್ರ, ಪ್ರೊ. ಕಿರಣ್ ಕೌಶಿಕ್ ಇದ್ದರು.