ಹುಲ್ಲಹಳ್ಳಿಯಲ್ಲಿರುವ ಶ್ರೀ ಬಸವೇಶ್ವರ ಶಾಲೆಯ ಆವರಣದಲ್ಲಿ ಎರಡು ದಿನಗಳ ಹೋಬಳಿಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಸಮರೂಪ ಸಮಾರಂಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿದರು. ಕಳಲೆ ಕೇಶವಮೂರ್ತಿ, ಮಹೇಶ್, ಎಚ್.ಬಿ.ಮರಿಯಪ್ಪ, ಎಚ್.ಎಂ.ಶಶಿಧರ, ವಿನುತಾ ಶಶಿಧರ, ಬಸವರಾಜು, ಪುಷ್ಪಾ, ಅಣ್ಣ ಬಸವಣ್ಣ ಇತರರಿದ್ದರು.
ಹುಲ್ಲಹಳ್ಳಿ: ಕ್ರೀಡೆಯಲ್ಲಿ ಗೆಲುವು ಮುಖ್ಯವಾದರೂ ಗೆಲುವಿಗಿಂತ ಕ್ರೀಡಾ ಸ್ಫೂರ್ತಿಯಿಂದ ಎಲ್ಲರೂ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಹುಲ್ಲಹಳ್ಳಿಯಲ್ಲಿರುವ ಶ್ರೀ ಬಸವೇಶ್ವರ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ಹೋಬಳಿಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಸಮರೂಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಗೆ ಮಾತ್ರ ಕ್ರೀಡೆಯಲ್ಲಿ ಸೀಮಿತಗೊಳಿಸದೆ ಜೀವನದ ಎಲ್ಲ ಹಂತಗಳಲ್ಲೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ಹಾಗೂ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಯುವಕರು ಇಂದು ಮನೆ ಒಳಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯದೆ ಕ್ರೀಡಾ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲೂಕು ಶಿಕ್ಷಣಾಧಿಕಾರಿ ಮಹೇಶ್, ಬಸವೇಶ್ವರ ಶಾಲೆಯ ಸಂಸ್ಥಾಪಕ ಎಚ್.ಬಿ.ಮರಿಯಪ್ಪ, ಕಾರ್ಯದರ್ಶಿ ಎಚ್.ಎಂ.ಶಶಿಧರ, ಸಹ ಕಾರ್ಯದರ್ಶಿ ವಿನುತಾ ಶಶಿಧರ, ಬಿಆರ್‌ಸಿ ಬಸವರಾಜು, ಟಿಪಿಇಒ ಪುಷ್ಪಾ, ಗ್ರಾಂಪಂ ಮಾಜಿ ಅಧ್ಯಕ್ಷ ಅಣ್ಣ ಬಸವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಂಗನಾಥ್, ಮುಖ್ಯಶಿಕ್ಷಕಿ ಚೆನ್ನ ಗೌರಮ್ಮ, ಇಸಿಒ ಫಣಿರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನೀಲಿಸಿದ್ದು, ಸಿಆರ್‌ಪಿ ಶಿವಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ನಾಗೇಶ, ಗೌತಮಿ, ಪುಟ್ಟರಾಜು, ಮುಖಂಡರಾದ ಶ್ರೀಕಂಠ ನಾಯಕ, ಪ್ರಸಾದ್, ನದೀಮ್ ಅಹಮದ್, ಮಹೇಶ್, ಸೇರಿದಂತೆ ವಿವಿಧ ಶಾಲಾ ದೈಹಿಕ ಶಿಕ್ಷಕರು ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.