ನಗರದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಇಬ್ಬರು ಕುಸ್ತಿಪಟುಗಳ ನಡುವಿನ ಕಾದಾಟದ ರೋಚಕ ಕ್ಷಣ. 
ಮೈಸೂರು

ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಕುಸ್ತಿ ಪಂದ್ಯಾವಳಿ

ಪ್ರಮುಖ ಮುಖ್ಯಾಂಶಗಳು

  • ಕುಸ್ತಿಪಟುಗಳು ಮಟ್ಟಿಯ ಮೇಲೆ ಮದ ಗಜಗಳಂತೆ ಸೆಣಸಾಟ
  • ನಗರದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಆಯೋಜನೆ
  • ರೈತರು, ಯುವಕರು, ಕುಸ್ತಿ ಅಭಿವಾನಿಗಳು ಪಂದ್ಯಾವಳಿಯನ್ನು ಕುತೂಹಲದಿಂದ ವೀಕ್ಷಣೆ
ಮೈಸೂರು: ನಗರದ ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಕರ್ನಾಟಕ ರಾಜ್ಯ ರೈತ ಸಂಘ-ರೈತ ಪರ್ವ ಸಂಘಟನೆಯಿಂದ ಏರ್ಪಡಿಸಿದ್ದ ಕುಸ್ತಿ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಕುಸ್ತಿಪಟುಗಳು ಮಟ್ಟಿಯ ಮೇಲೆ ಮದ ಗಜಗಳಂತೆ ಸೆಣಸಾಟ ನಡೆಸಿದರು. ತಮ್ಮ ನೆಚ್ಚಿನ ಪೈಲ್ವಾನರ ಆಟಕ್ಕೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ತಟ್ಟಿ ಉತ್ತೇಜನ ನೀಡಿದರು. 
ಇಲ್ಲಿ ಜಮಾವಣೆಗೊಂಡಿದ್ದ ರೈತರು, ಯುವಕರು, ಕುಸ್ತಿ ಅಭಿವಾನಿಗಳು ಪಂದ್ಯಾವಳಿಯನ್ನು ಕುತೂಹಲದಿಂದ ವೀಕ್ಷಿಸಿದರು. ಮಣ್ಣಿನ ಅಖಾಡದಲ್ಲಿ ಪೈಲ್ವಾನರು ಪರಸ್ಪರ ಕಾದಾಡುವ ಮೂಲಕ ಗೆಲುವಿಗೆ ಶತಪ್ರಯತ್ನಿಸಿದರು. ಕಾದಾಟದ ಮೈನವಿರೇಳಿಸುವ ದೃಶ್ಯಗಳು ನೆರೆದವರಿಗೆ ಮನರಂಜನೆ ಉಣಬಡಿಸಿತು.
ಹಲವು ತೂಕ ವಿಭಾಗಗಳಲ್ಲಿ ಪಂದ್ಯಗಳು ನಡೆದವು. ಅನುಭವಿಗಳ ಜತೆಗೆ ಯುವ ಪೈಲ್ವಾನರೂ ಕಣಕ್ಕಿಳಿದು ತಮ್ಮ ಸಾಮರ್ಥ್ಯ ತೋರಿದರು. ಕೆಲ ಕುಸ್ತಿಗಳು ಕ್ಷಣಾರ್ಧದಲ್ಲೇ ಮುಕ್ತಾಯವಾದರೆ, ಇನ್ನೂ ಕೆಲ ಪಂದ್ಯಗಳು ದೀರ್ಘಕಾಲದವರೆಗೂ ಹಿಗ್ಗಿದವು. ಇವುಗಳೆಲ್ಲ ಪ್ರೇಕ್ಷಕರನ್ನು ಕೌತುಕದಲ್ಲಿಟ್ಟವು. ಒಟ್ಟಿನಲ್ಲಿ ನಾಡ ಕುಸ್ತಿ ರಂಗೇರಿತ್ತು. ಕುತೂಹಲ, ಹಣಾಹಣಿಯಿಂದ ಕೂಡಿದ್ದ ಜಟ್ಟಿಗಳ ಸೆಣಸಾಟವು ಕುಸ್ತಿಯ ಪ್ರಿಯರಲ್ಲಿ ಉತ್ಸಾಹ ಹಿಮ್ಮಡಿಗೊಳಿಸಿತು. ಕೊನೆಯಲ್ಲಿ ವಿಜೇತ ಪೈಲ್ವಾನರಿಗೆ ನಗದು ಬಹುವಾನ, ಟ್ರೋಫಿ ಹಾಗೂ ಗೌರವ ಪತ್ರ ವಿತರಿಸಲಾಯಿತು.