ಸುಚಿತ್ರ ಕಲಾ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ಗೀಟು ಗೀಚು ವಿಶೇಷ ಮಕ್ಕಳ ಕಲಾ ಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು. ಶುಭಾ ಸಂಜಯ್ ಅರಸ್, ಪೃಥ್ವಿ ಸುಧೀಂದರ್, ಸಾಸ್ವತಿ ಸಿಂಗ್, ಅಜಿತ್ ಪೈ, ಅನುರಾಧಾ ಗಿರೀಶ್ ಇದ್ದರು.
ಮೈತ್ರಿ ಚಾರಿಟಬಲ್ ಟ್ರಸ್ಟ್, ಮೈತ್ರಿ ವಿಶೇಷ ಮಕ್ಕಳ ಶಾಲೆ ಸಹಯೋಗದಲ್ಲಿ ನಗರದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಗೀಟು ಗೀಚು’ ವಿಶೇಷ ಮಕ್ಕಳ ಕಲಾ ಪ್ರದರ್ಶನ ಗಮನ ಸೆಳೆಯಿತು.
ಮೈತ್ರಿ ವಿಶೇಷ ಮಕ್ಕಳ ಶಾಲೆಯ 45ನೇ ವಾರ್ಷಿಕೋತ್ಸವದ ಅಂಗವಾಗಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ವಿಶೇಷ ಮಕ್ಕಳು ರಚಿಸಿದ್ದ 100ಕ್ಕೂ ಹೆಚ್ಚಿನ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಗಣೇಶ, ಪೂರಿ ಜಗನ್ನಾಥ, ಕುದುರೆ, ಮೀನು, ಹಕ್ಕಿ ಹೀಗೆ ನಾನಾ ಬಗೆಯ ಚಿತ್ರಗಳು ಗಮನ ಸೆಳೆದವು.
ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿಶೇಷ ಮಕ್ಕಳಿಗೆ ನಾವು ಸಹಾನುಭೂತಿ ತೋರಿದರೆ ಸಾಲುವುದಿಲ್ಲ. ಅವರಲ್ಲಿ ಇರುವ ಪ್ರತಿಭೆಯನ್ನು ಹೊರತಂದು, ಬದುಕಲು ಅವಕಾಶ ಮಾಡಿಕೊಡಬೇಕು. ಇಂತಹ ಮಕ್ಕಳ ಭವಿಷ್ಯ ರೂಪಿಸಲು ಎಲ್ಲರೂ ಕೈ ಜೋಡಿಸಿ, ಸಹಾಯ ಮಾಡಬೇಕು ಎಂದು ಹೇಳಿದರು.
ಮೈತ್ರಿ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಪೃಥ್ವಿ ಸುಧೀಂದರ್ ಮಾತನಾಡಿ, ವಿಶೇಷ ಮಕ್ಕಳನ್ನು ಸಮಾಜದಿಂದ ದೂರ ಇಡಬಾರದು. ಅವರಿಗೂ ಸಮಾಜದಲ್ಲಿ ಬದುಕಿ ತೋರಿಸುವಂತೆ ಧೈರ್ಯ ತುಂಬಬೇಕು. ಅಲ್ಲದೆ, ಅವರು ಮುಖ್ಯವಾಹಿನಿಗೆ ಬರಬೇಕೆಂಬುದು ಟ್ರಸ್ಟ್‌ನ ಧ್ಯೇಯ ಕೂಡ ಆಗಿದೆ. ಅವರಿಗೆ ಮಧುಬನಿ, ಕಾಫಿ ಪೇಂಟಿಂಗ್, ಗೊಂಡ್ ಆರ್ಟ್, ಬೋಹೊ ಆರ್ಟ್ ಬೇರೆ ಬೇರೆ ರೀತಿಯ ಪೇಂಟಿಂಗ್‌ಗಳ ಕಲೆಯನ್ನು ಕಲಿಸಲಾಗುತ್ತದೆ ಎಂದು ವಿವರಣೆ ನೀಡಿದರು.
ಶಾಲೆಯ ಚಿತ್ರಕಲಾ ಶಿಕ್ಷಕಿ ಅನುರಾಧಾ ಗಿರೀಶ್ ಅವರನ್ನು ಅಭಿನಂದಿಸಲಾಯಿತು. ನವ ಪ್ರೇಣಾ ೌಂಡೇಷನ್‌ನ ಸಂಸ್ಥಾಪಕಿ ಸಾಸ್ವತಿ ಸಿಂಗ್, ಉದ್ಯಮಿ ಅಜಿತ್ ಪೈ ಇದ್ದರು.