ಡಾ.ಎಸ್.ಶ್ರೀಕಾಂತ್. 
ಮೈಸೂರು

ಆದಿವಾಸಿಗಳ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಅಗತ್ಯ

ವಸಂತಕುಮಾರ್ ಬಿ

ಹುಣಸೂರು :

ರಾಜ್ಯ ಸರ್ಕಾರ ಆದಿವಾಸಿ ಅಭಿವೃದ್ಧಿ ಮಂಡಳಿಯನ್ನು ಪ್ರತ್ಯೇಕವಾಗಿ ರಚಿಸಿ ಆದಿವಾಸಿಗಳ ಅಭಿವೃದ್ಧಿಗೆ ಕ್ರಮವಹಿಸಬೇಕೆಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಆಯೋಜಿಸಿದ್ದ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡು ಅಲೆಮಾರಿ -ಆದಿವಾಸಿ ಅಭಿವೃದ್ಧಿ ಆಯೋಗ, ಮಂಡಳಿಯನ್ನು ಜಂಟಿಯಾಗಿ ಇನ್ನು ಒಂದು ತಿಂಗಳಲ್ಲಿ ರಚಿಸುವುದಾಗಿ ತಿಳಿಸಿದ್ದರು. ಆದರೆ ಅಲೆಮಾರಿ ಮತ್ತು ಆದಿವಾಸಿ ಮಂಡಳಿಗಳನ್ನು ಜಂಟಿಯಾಗಿ ರಚಿಸುವುದು ಸರಿಯಲ್ಲ. ಅಲೆಮಾರಿಗಳು ಎಸ್‌ಟಿ, ಎಸ್‌ಸಿ ಮತ್ತು ಒಬಿಸಿ ಮೂರು ಕಡೆಯೂ ಇದ್ದಾರೆ. ಅಲೆಮಾರಿಗಳ ಜೀವನ ಶೈಲಿ, ಸಂಸ್ಕೃತಿ ಚಲನಶೀಲತೆ, ಬೇಡಿಕೆ ಎಲ್ಲವೂ ಬೇರೆಯೇ ಇವೆ. ಆದರೆ ಆದಿವಾಸಿಗಳು ಪಾರಂಪರಿಕವಾಗಿ ಅರಣ್ಯ ವಾಸಿಗಳು. ವನ್ಯಜೀವಿ ಕಾಯ್ದೆಯಿಂದ ಕಾಡಿನಿಂದ ಹೊರಹಾಕಲ್ಪಟ್ಟವರು. ಹಾಗಾಗಿ 12 ಅರಣ್ಯವಾಸಿ ಬುಡಕಟ್ಟುಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಮಂಡಳಿಯ ಸದಸ್ಯರನ್ನಾಗಿಸಬೇಕು ಎಂದು ಒತ್ತಾಯಿಸಿದರು.
ಮೊದಲೆರದು ವರ್ಷ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಯೇ ಮಂಡಳಿ ಕಾರ್ಯ ನಿರ್ವಹಿಸಲಿ. ಮಂಡಳಿ ಸ್ಥಿರತೆ ಬಂದ ಬಳಿಕ ಆದಿವಾಸಿ ಕ್ಷೇತ್ರದಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿದ ನುರಿತ ಸಾಮಾಜಿಕ ಕಾರ್ಯಕರ್ತರನ್ನು, ಸಾಹಿತಿಗಳನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.