ನಗರದ ದಟ್ಟಗಳ್ಳಿಯಲ್ಲಿನ ಸೈನಿಕ ಉದ್ಯಾನದಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ಪರಿಸರ ದಿನ ಆಚರಿಸಲಾಯಿತು. ಲಕ್ಷ್ಮೀ ಕಿರಣ್, ರಾಕೇಶ್‌ಭಟ್, ಬಿ.ಎಂ.ರಘು, ಆರ್.ಸೋಮಶೇಖರ್, ಈರೇಗೌಡ, ಕಿರಣ್ ಮಾದೇಗೌಡ, ಬಸವಣ್ಣ, ಮಧು, ಹೇಮಾ ಗಂಗಪ್ಪ ಇದ್ದರು. 
ಮೈಸೂರು

ಪರಿಸರ ದಿನಕ್ಕೆ ತಾಯಿಯ ಹೆಸರಲ್ಲಿ ಗಿಡ ನೆಡುವ ಸಂಕಲ್ಪ

ಪ್ರಮುಖ ಮುಖ್ಯಾಂಶಗಳು

  • ಮನುಷ್ಯ ಪ್ರಕೃತಿ ಮೇಲೆ ಮಾಡುವ ಹಾನಿಗೆ ಹೋಲಿಸಿದರೆ ನಾವು ಪರಿಸರ ದಿನಾಚರಣೆಯಂದು ನೆಡುವ ಗಿಡಗಳ ಸಂಖ್ಯೆ ತೀರ ಕಡಿಮೆ
  • ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕು
ಮೈಸೂರು:ನಗರದ ದಟ್ಟಗಳ್ಳಿಯಲ್ಲಿನ ಸೈನಿಕ ಉದ್ಯಾನದಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದಿಂದ ಪರಿಸರ ದಿನ ಆಚರಿಸಲಾಯಿತು.
ಉದ್ಯಾನ ಹಾಗೂ ಪಕ್ಕದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು, ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂದು ಜೂನ್ ತಿಂಗಳಿನಾದ್ಯಂತ ಪ್ರತಿಯೊಬ್ಬರು ತಮ್ಮ ತಾಯಿ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು, ಅದನ್ನು ಪೋಷಿಸಲು ಸಂಕಲ್ಪ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್ ಮಾತನಾಡಿ, ಮನುಷ್ಯ ಪ್ರಕೃತಿ ಮೇಲೆ ಮಾಡುವ ಹಾನಿಗೆ ಹೋಲಿಸಿದರೆ ನಾವು ಪರಿಸರ ದಿನಾಚರಣೆಯಂದು ನೆಡುವ ಗಿಡಗಳ ಸಂಖ್ಯೆ ತೀರ ಕಡಿಮೆ. ಆದರೂ ಪ್ರಕೃತಿಯ ಮೇಲೆ ಪ್ರೀತಿಯಿಂದ ಮತ್ತು ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಲಭಿಸಲಿ ಎಂಬ ಉದ್ದೇಶದಿಂದ ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರ ಪ್ರೀತಿಯನ್ನು ಚಿಕ್ಕವಯಸ್ಸಿನಿಂದಲೇ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್‌ಭಟ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕು. ಯಾವುದೇ ಪ್ಲಾಸ್ಟಿಕ್ ಹಾಗೂ ಒಣಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯಬಾರದು ಎಂದರು.
ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್.ಸೋಮಶೇಖರ್, ಈರೇಗೌಡ, ಮುಖಂಡರಾದ ಕಿರಣ್ ಮಾದೇಗೌಡ, ಬಸವಣ್ಣ, ಮಧು, ಹೇಮಾ ಗಂಗಪ್ಪ, ಮಂಡಲ ಪದಾಧಿಕಾರಿಗಳಾದ ಎಚ್.ಜಿ. ರಾಜಮಣಿ, ಶಿವು ಪಟೇಲ್, ಎ.ಎಂ ಗಿರೀಶ್, ಎಚ್.ಎಸ್.ಹಿರಿಯಣ್ಣ, ಬಿ.ಸಿ.ಶಶಿಕಾಂತ್, ರಾಚಪ್ಪಾಜಿ, ಎನ್.ಶುಭಶ್ರೀ, ಕಲಾವತಿ, ವಿನುತಾ, ಗ್ರೀನ್ ದಟ್ಟಗಳ್ಳಿ ಫೌಂಡೇಷನ್‌ನ ನಟರಾಜ್, ಮಂಜುನಾಥ್, ರಾಮಕೃಷ್ಣ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವಲಿಂಗಪ್ಪ, ಮಹಾಲಕ್ಷ್ಮೀ ದೇವಸ್ಥಾನದ ಟ್ರಸ್ಟಿಗಳು ಹಾಜರಿದ್ದರು.