- ಹೂಡಿಕೆಯ ಹಣವನ್ನು ದ್ವಿಗುಣಗೊಳಿಸಿ ಆಸೆ ತೋರಿಸಿದ ವಂಚಕರು
- ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೈಸೂರು: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1.77 ಕೋಟಿ ರೂ. ವಂಚಿಸಲಾಗಿದೆ.
ಜೆ.ಪಿ.ನಗರದ 51 ವರ್ಷದ ವ್ಯಕ್ತಿಗೆ ಬಂದ ವ್ಯಾಟ್ಸ್‌ಆ್ಯಪ್ ಸಂದೇಶದಲ್ಲಿ ಷೇರು ಮಾರುಕಟ್ಟೆ ಮತ್ತು ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಲಾಗಿದೆ. ಹೂಡಿಕೆಯ ಹಣವನ್ನು ದ್ವಿಗುಣ ಮಾಡಿಕೊಳ್ಳಬಹುದು ಎಂದು ಆಸೆ ತೋರಿಸಲಾಗಿದೆ.
ಬಳಿಕ ಪೋಲೆನ್ ಕ್ಯಾಪ್ ಆಪ್‌ನಲ್ಲಿ ಟ್ರೇಡಿಂಗ್‌ಗೆ ನೋಂದಣಿ ಮಾಡಿಸಲಾಗಿದೆ. ಬಳಿಕ ಈ ವ್ಯಕ್ತಿ, ಹಂತ ಹಂತವಾಗಿ 1.77 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ನಂತರ ಆ್ಯಪ್‌ನಲ್ಲಿ ವಿತ್‌ಡ್ರಾ ಮಾಡಲು ಮುಂದಾದಾಗ ಹಣವನ್ನು ಫ್ರೀಜ್ ಮಾಡಿರುವುದಾಗಿ ಸಂದೇಶ ಬಂದಿದ್ದು, ಬಳಿಕ ಮೋಸ ಹೋಗಿರುವುದು ಗೊತ್ತಾಗಿದೆ.
ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.