ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ಇಂಟರ್‌ನ್ಯಾಷನಲ್ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್) ಮೈಸೂರು ಚಾಪ್ಟರ್ ವತಿಯಿಂದ ಭೂಗತ್ಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಆವಂಟ್ ಬಿಕೆಜಿ ಆಸ್ಪತ್ರೆ, ವಿದ್ಯಾ ಡೆಂಟಲ್ ಕೇರ್ ಹಾಗೂ ಡಾ. ರಾಜೇಶ್ ಕಣ್ಣಿನ ಆಸ್ಪತ್ರೆಗಳ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 234ಕ್ಕೂ ಹೆಚ್ಚು ಮಂದಿ ಭಾಗವಹಿಸಿ ವಿವಿಧ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಂಡರು.
ಶಿಬಿರಕ್ಕೆ ವಾಜಮಂಗಲ ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಅಗತ್ಯ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಐಎಲ್‌ವೈಎಫ್ ಮೈಸೂರು ಚಾಪ್ಟರ್‌ನ ಮಾಜಿ ಅಧ್ಯಕ್ಷ ಹಾಗೂ ವಕೀಲ ಮಹಾದೇವಪ್ರಸಾದ್, ಉಪಾಧ್ಯಕ್ಷ ತೀರ್ಥಸ್ವಾಮಿ, ಕಾರ್ಯದರ್ಶಿ ರುದ್ರೇಶ್, ಐಕೇರ್ ಸಂಯೋಜಕ ಹರೀಶ್ ಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮದ ಕಾಶಪ್ಪ, ಪ್ರದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಚೇರಿಯ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ದೇವಸ್ಥಾನದ ಅಧ್ಯಕ್ಷ ಶಿವಣ್ಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗ್ರಾಮದ ಹಿರಿಯರು ಮತ್ತು ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.
ವೈದ್ಯಕೀಯ ಸೇವೆ ಒದಗಿಸಿದ ಡಾ. ಕುಶಾಲಾ, ಡಾ. ಭೂಮಿಕಾ ಹಾಗೂ ಕಿವಿ-ಮೂಗು-ಗಂಟಲು ತಜ್ಞ ಡಾ. ಚಿರಂಜೀವಿ ಸೇರಿದಂತೆ ವೈದ್ಯಕೀಯ ತಂಡದವರಿಗೆ ಐಎಲ್‌ವೈಎಫ್ ಮೈಸೂರು ಚಾಪ್ಟರ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.