ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು.
ಮೈಸೂರು: ಸಾಂಸ್ಕೃತಿಕವಾಗಿ ಮಹತ್ವ ಇರುವ ಕೃತಿಗಳನ್ನು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಓದುಗರ ಮುಂದಿಟ್ಟಿದ್ದಾರೆ. ಬೇಗಂಪುರ ಕೃತಿಯು ಹಲವು ಕೃತಿಗಳನ್ನು ಓದಲು ಪ್ರೇರೇಪಣೆ ಮಾಡಲಿದೆ. ಇತಿಹಾಸ, ಚರಿತ್ರೆಗಳನ್ನು ನೋಡುವ ಕ್ರಮವನ್ನು ಕೃತಿ ಬದಲಾಯಿಸಲಿದೆ ಎಂದು ಸಂಸ್ಕೃತಿ ಚಿಂತಕ ಬಿ.ಮಹೇಶ್ ಹರವೆ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಅರಿವು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ಸಹಯೋಗದಲ್ಲಿ ನಗರದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅನುವಾದದ ಕೃತಿಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮೊದಲಿಗೆ ಬೇಗಂಪುರ ಕೃತಿ ಕಟ್ಟಿಕೊಡುವ ವಾನವೀಯತೆ ಕುರಿತು ವಿಷಯ ಮಂಡಿಸಿದರು.
ಸಾವಿರಾರು ವರ್ಷಗಳಿಂದ ಜಾತಿ ಕಾರಣಕ್ಕೆ ನಿರ್ಲಕ್ಷೃ ಒಳಗಾದ ಮರೆತು ಹೋದ ಇತಿಹಾಸವನ್ನು ಕೃತಿ ತಿಳಿಸಿಕೊಡಲಿದೆ. ಆ ಮೂಲಕ ಇತಿಹಾಸ ಮರು ಚಿಂತನೆ ಬಹಳ ದೊಡ್ಡ ದೂರದರ್ಶಕತ್ವನ್ನು ನಿರೂಪಿಸಲಿದೆ. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ನೆಲೆಯಲ್ಲಿ ಹೋರಾಟಗಳು ಭಾರತದ ಮೂಲದಿಂದಲೂ ಬಂದಿದೆ ಎಂಬುದನ್ನು ಪುಸ್ತಕ ಮನವರಿಕೆ ಮಾಡಿಲಿದೆ ಎಂದು ಹೇಳಿದರು.
ಡಾ.ಪಿ.ಆರಡಿ ಮಲ್ಲಂ್ಯು ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಇದ್ದರು.