ಸರಗೂರಿನ ಪಡವಲು ವಿರಕ್ತ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನವ ಜೋಡಿಗಳಿಗೆ ಗಣ್ಯರು ಶುಭಾ ಹಾರೈಸಿದರು. ಶಾಸಕ ಅನಿಲ್ ಚಿಕ್ಕಮಾದು, ಗಣೇಶ ಪ್ರಸಾದ್, ಶ್ರೀ ಮಹದೇವ ಸ್ವಾಮೀಜಿ ಯು.ಎಸ್ ಶೇಖರ್, ಶ್ರೀನಿವಾಸ, ಗಿರೀಶ್ ಇತರರು ಇದ್ದರು.
ಸರಗೂರು: ವಿವಾಹದ ಹೆಸರಿನಲ್ಲಿ ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಲು ಸಾಮೂಹಿಕ ವಿವಾಹ ಉತ್ತಮ ನಡೆ. ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡವ-ಬಲ್ಲಿದ, ಜಾತಿ, ಧರ್ಮದ ಸಂಕೋಲೆಯಿಂದ ಹೊರ ಬರಲು ಸಹಾಯವಾಗುತ್ತದೆ. ಭಾವೈಕ್ಯ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಮಠಗಳಲ್ಲಿ ನಡೆಯಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಬಿಡಗಲು ಗ್ರಾಮದ ವಿರಕ್ತ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ನಮ್ಮ ತಾಲೂಕಿನ ವಿರಕ್ತ ಮಠದಲ್ಲಿ ಮೂರನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ. ಮಠದ ಶ್ರೀ ಮಹದೇವ ಸ್ವಾಮೀಜಿ ಈ ಕಾರ್ಯ ಶ್ಲಾಘನೀಯ ಎಂದರು.
ಗುಂಡ್ಲುಪೇಟೆ ಶಾಸಕ ಗಣೇಶಪ್ರಸಾದ್ ಮಾತನಾಡಿ, ಮಠಗಳಲ್ಲಿ ನಡೆಯುವ ಸಾಮೂಹಿಕ ಮದುವೆಗಳಲ್ಲಿ ವಿವಾಹವಾಗುವ ನವದಂಪತಿಗಳು ಪುಣ್ಯವಂತರು, ನವ ದಂಪತಿಗಳಿಗೆ ಅನೇಕ ಸ್ವಾಮೀಜಿಗಳು ಬಂದು ಆಶೀರ್ವಾದ ಮಾಡುತ್ತಾರೆ. ಶ್ರೀ ಆಶೀರ್ವಾದ ಪಡೆದ ನೀವು ಪುಣ್ಯವಂತರು ಎಂದರು.
ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿದರು. ಮಾದಾಪುರ ಮಠದ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಸ್ವಾಮೀಜಿ, ಉದ್ಯಮಿ ಯು.ಎಸ್.ಶೇಖರ್, ಮೈಮುಲ್ ಅಧ್ಯಕ್ಷ ಈರೇಗೌಡ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ಕೋಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ರುದ್ರಪ್ಪ, ಪಪಂ ಅಧ್ಯಕ್ಷೆ ಚೈತ್ರ ಸ್ವಾಮಿ, ಸದಸ್ಯರಾದ ಶ್ರೀನಿವಾಸ, ಚೆಲುವ ಕೃಷ್ಣ, ಮುಖಂಡರಾದ ಸಿ.ಕೆ.ಗಿರೀಶ್, ಗಿರಿ ಕುಮಾರ್, ಗಿರೀಶ್, ಡಿ.ಸಿ.ಮಹೇಶ್, ರಾಜಪ್ಪ, ಸಿದ್ದಪ್ಪ, ಚನ್ನಮಲ್ಲಪ್ಪ, ಪಿ.ನಂದೀಶ ಇತರರು ಇದ್ದರು.