ಕಂಪಲಾಪುರದಲ್ಲಿ ಆಯೋಜಿಸಿದ್ದ ಕಂಪ್ಲಾಪುರ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವು ಸಾಧಿಸಿದ ಭಗತ್ ಸಿಂಗ್ ವಾರಿಯರ್ಸ್ ತಂಡ ಟ್ರೋಫಿಯೊಂದಿಗೆ.
- ವಿನಾಯಕ ಗೆಳೆಯರ ಬಳಗ ದ್ವಿತೀಯ ಸ್ಥಾನ
ಕಂಪಲಾಪುರ : ಕಂಪಲಾಪುರದಲ್ಲಿ 2 ದಿನಗಳ ಕಾಲ ನಡೆದ ಕಂಪ್ಲಾಪುರ ಪ್ರೀಮಿಯರ್ ಲೀಗ್‌ನಲ್ಲಿ ಕಂಪಲಾಪುರದ ಭಗತ್ ಸಿಂಗ್ ವಾರಿಯರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ವಿನಾಯಕ ಗೆಳೆಯರ ಬಳಗ ದ್ವಿತೀಯ ಸ್ಥಾನ ಹಾಗೂ ಬಿಎಸ್‌ಎಫ್ ತಂಡ ತೃತೀಯ ಸ್ಥಾನ ಗಳಿಸಿತು. ಅತ್ಯುತಮ ಆಟವಾಡಿದ ಅಪ್ಪು ಪಂದ್ಯ ಪುರುಷೋತ್ತಮ, ಉತ್ತಮ ಬ್ಯಾಟ್ಸಮನ್ ಆಗಿ ಸೋನು, ಉತ್ತಮ ಬೌಲರ್ ಆಗಿ ರಾಕೇಶ್ ಪುಟ್ಟು ಆಯ್ಕೆಯಾದರು. ತಂಡದ ನಾಯಕ ಸಂಜು, ಸುರೇಶ್, ಗಿರೀಶ್, ಸತೀಶ್, ಮಹೇಶ್, ನಾಗು, ರಾಕೇಶ್ ಇದ್ದರು. ಅಭಿಮಾನಿಗಳು ಇಲ್ಲಿನ ವಿನಾಯಕ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.